ಮನರಂಜನೆ

ನಿರ್ದೇಶಕ ಪವನ್ ಒಡೆಯರ್-ಕಿಚ್ಚ ಸುದೀಪ್ ಭೇಟಿಯ ಫೋಟೋ ವೈರಲ್

ಬೆಂಗಳೂರು,ಜು.31-`ನಟಸಾರ್ವಭೌಮ’ ಚಿತ್ರವನ್ನು ನಿರ್ದೇಶನ ಮಾಡುತ್ತಿರುವ ಪವನ್ ಒಡೆಯರ್ ಅವರನ್ನು ಕಿಚ್ಚ ಸುದೀಪ್ ಭೇಟಿಯಾಗಿದ್ದಾರೆ.

ಪವನ್ ಒಡೆಯರ್ ಹಾಗೂ ಸುದೀಪ್ ಒಟ್ಟಿಗೆ ಇರುವ ಫೋಟೋವನ್ನು ಪವನ್ ಒಡೆಯರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪವನ್ ಒಡೆಯರ್ ಅವರನ್ನು ಸುದೀಪ್ ಭೇಟಿಯಾಗಿರುವುದು ಸಹಜವಾಗಿಯೇ ಅಭಿಮಾನಿಗಳಲ್ಲಿ ಕುತೂಹಲ ಮೂಡಿರುವುದರ ಜತೆಗೆ ಈ ಭೇಟಿ ಹಿಂದೆ ಏನಾದರೂ ವಿಶೇಷ ಇರಬಹುದಾ ಎಂಬ ಪ್ರಶ್ನೆ ಮೂಡಿದೆ.

ಒಂದು ವೇಳೆ ನಟಸಾರ್ವಭೌಮ ಚಿತ್ರದಲ್ಲಿ ಸುದೀಪ್ ಏನಾದರೂ ವಿಶೇಷ ಪಾತ್ರ ಮಾಡಬಹುದಾ? ಹಿನ್ನಲೆ ಧ್ವನಿ ನೀಡಬಹುದಾ? ಅಥವಾ ಹಾಡು ಹೇಳಬಹುದಾ? ಎಂದು ಅಭಿಮಾನಿಗಳು ಚರ್ಚೆ ಮಾಡುತ್ತಿದ್ದಾರೆ.

ಆದರೆ ಇದು ಸಾಮಾನ್ಯ ಭೇಟಿ ಅಷ್ಟೇ ಎಂದು ಹೇಳಲಾಗುತ್ತಿದೆ. ‘ರುಚಿ ತುಂಬಾ ಚೆನ್ನಾಗಿತ್ತು, ಥ್ಯಾಂಕ್ ಯೂ, ಲವ್ ಯೂ ಸುದೀಪ್ ಸರ್ಎಂದು ಸ್ಟೇಟಸ್ ಹಾಕಿದ್ದಾರೆ. ಬಹುಶಃ ಸುದೀಪ್ ಅವರು, ಪವನ್ ಒಡೆಯರ್ ಗೆ ರುಚಿಕರ ಊಟ ಮಾಡಿ ಬಡಿಸಿದ್ದಾರೆ ಎನ್ನುವುದು ಇಲ್ಲಿ ಗೊತ್ತಾಗುತ್ತಿದೆ.

ಅದೇನೇ ಇರಲಿ, ಸುದೀಪ್ ಮತ್ತು ಒಡೆಯರ್ ಭೇಟಿ ಸಹಜವಾದದು. ಒಂದು ವೇಳೆ ನಟಸಾರ್ವಭೌಮ ಚಿತ್ರದ ಹಿನ್ನಲೆ ಆಗಿದ್ದರೆ ಅಭಿಮಾನಿಗಳಿಗೆ ಇದಕ್ಕಿಂತ ಸಂತಸದ ವಿಚಾರ ಇನ್ನೊಂದಿಲ್ಲ. (ಎಂ.ಎನ್)

 

Leave a Reply

comments

Related Articles

error: