ಸುದ್ದಿ ಸಂಕ್ಷಿಪ್ತ

ಅನುವಾದ ಅಧ್ಯಯನದಲ್ಲಿ ಸಂಶೋಧನಾ ವಿಧಾನ ಕುರಿತು ತರಬೇತಿ

ಮೈಸೂರು,ಜು.31-ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯ (ಸಿ...ಎಲ್.) ರಾಷ್ಟ್ರೀಯ ಅನುವಾದ ಮಿಷನ್ (ಎನ್.ಟಿ.ಎಂ) ಸಹಯೋಗದೊಂದಿಗೆ ಆ.2 ರಿಂದ 22 ರವರೆಗೆ ಮೂರು ವಾರಗಳ ಕಾಲ ಅನುವಾದ ಅಧ್ಯಯನದಲ್ಲಿ ಸಂಶೋಧನಾ ವಿಧಾನ ಕುರಿತು ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿದೆ.

ಆ.2 ರಂದು ಬೆಳಿಗ್ಗೆ 10 ಗಂಟೆಗೆ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಭಾಷಾ ಸಂಸ್ಥಾನದ ನಿರ್ದೇಶಕರಾದ ಪ್ರೊ.ಡಿ.ಜಿ.ರಾವ್ರವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ರಾಷ್ಟ್ರೀಯ ಅನುವಾದ ಮಿಷನ್ ಉಸ್ತುವಾರಿ ಅಧಿಕಾರಿಯಾದ ಡಾ.ತಾರಿಖ್ ಖಾನ್ ಅವರು ಅನುವಾದ ತರಬೇತಿ ಕಾರ್ಯಕ್ರಮದ ಉದ್ದೇಶಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ.

ಭಾಷಾ ಸಂಸ್ಥೆಯ ಅನುವಾದ ಅಧ್ಯಯನ ಕೇಂದ್ರದ ಮುಖ್ಯಸ್ಥರಾದ ಡಾ.ಸಿ.ವಿ.ಶಿವರಾಮಕೃಷ್ಣರವರು ಅನುವಾದ ಕುರಿತು ಪ್ರೋತ್ಸಾಹಕ ಭಾಷಣವನ್ನು ಮಾಡಲಿದ್ದಾರೆ. 17 ರಾಜ್ಯಗಳು, 15 ಭಾಷೆಗಳು ಮತ್ತು 24 ವಿಶ್ವವಿದ್ಯಾಲಯಗಳು/ಸಂಸ್ಥೆಗಳನ್ನು ಪ್ರತಿನಿಧಿಸುವ 65 ಮಂದಿ ಆಸಕ್ತರು ಅನುವಾದ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. (ಎಂ.ಎನ್)

Leave a Reply

comments

Related Articles

error: