
ಮೈಸೂರು
ಬ್ಯಾಗ್ ನಲ್ಲಿರಿಸಲಾದ ಚಿನ್ನಾಭರಣ ಕಳುವು
ಮೈಸೂರು,ಆ.1:- ರಾಜಹಂಸ ಬಸ್ ನಲ್ಲಿ ಲಗೇಜ್ ಇಡುವ ಜಾಗದಲ್ಲಿರಿಸಲಾದ ಬ್ಯಾಗ್ ನಲ್ಲಿದ್ದ ಚಿನ್ನಾಭರಣವನ್ನು ಯಾರೋ ಕದ್ದೊಯ್ದ ಘಟನೆ ನಡೆದಿದೆ.
ಜು.11ರಂದು ರಾತ್ರಿ 10.45 ಕ್ಕೆ ತಿಲಕ್ ಪ್ರಸಾದ್ ಎಂಬವರು ತಮ್ಮ ಪತ್ನಿಯ ಜೊತೆ ಮೈಸೂರಿಗೆ ಬರಲು ಮಂಗಳೂರಿನಿಂದ ರಾಜಹಂಸ ಬಸ್ಸನ್ನು ಹತ್ತಿದ್ದು, ಸೀಟ್ ನಂ. 19-20 ರಲ್ಲಿ ಕುಳಿತು ಪ್ರಯಾಣಿಸಿದ್ದರು. ಅವರ ಬ್ಯಾಗ್ಗಳನ್ನು ಲಗೇಜ್ ಇಡುವ ಜಾಗದಲ್ಲಿ ಇಡಲಾಗಿತ್ತು. ಜು.12 ರಂದು ಬೆಳಗಿನ ಜಾವ 05.20 ಕ್ಕೆ ಮೈಸೂರಿಗೆ ಬಂದು ಐಶ್ವರ್ಯ ಪೆಟ್ರೋಲ್ ಬಂಕ್ ಬಳಿ ಬಸ್ಸಿನಿಂದ ಇಳಿದು ಮನೆಗೆ ಹೋಗಿ ಜು.13ರಂದು ಲಗೇಜ್ ಬ್ಯಾಗ್ನಲ್ಲಿದ್ದ ಡ್ರೆಸ್ಗಳನ್ನು ಹೊರಗೆ ತೆಗೆದು ಪರಿಶೀಲಿಸಿದಾಗ ಅದರಲ್ಲಿಟ್ಟಿದ್ದ 72ಗ್ರಾಂ ತೂಕದ 2 ಚಿನ್ನದ ನೆಕ್ಲೆಸ್30ಗ್ರಾಂ ತೂಕದ 1 ಚಿನ್ನದ ಕಡಗ,10ಗ್ರಾಂ ತೂಕದ 1 ಚಿನ್ನದ ಬಳೆ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಈ ಕುರಿತು ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)