ಮೈಸೂರು

ಮನೆಯ ಮುಂದೆ ನಿಲ್ಲಿಸಿದ್ದ ಮಿನಿ ಟ್ರಕ್ ನ ಬ್ಯಾಟರಿ ಕಳುವು

ಮೈಸೂರು,ಆ.1:- ವ್ಯಕ್ತಿಯೋರ್ವರು ಮನೆಯ ಮುಂದೆ ನಿಲ್ಲಿಸಿದ್ದ ಮಿನಿ ಟ್ರಕ್ ನ ಬ್ಯಾಟರಿಯನ್ನು ಯಾರೋ ಕಳ್ಳರು ಕದ್ದೊಯ್ದ ಘಟನೆ ವಿವಿಪುರಂ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಗೋವಿಂದ ಎಂಬವರು , #23, 02 ನೇ ಕ್ರಾಸ್, ಮಂಜುನಾಥ ಪುರದಲ್ಲಿ   ಮಹೀಂದ್ರಾ ಮಿನಿ ಟ್ರಕ್. ಕೆಎ-09 ಡಿ-0213 ನ್ನು ಜು.28 ರಂದು ರಾತ್ರಿ 10 ಗಂಟೆ ಸಮಯಕ್ಕೆ ತಮ್ಮ ಮನೆಯ ಮುಂಭಾಗ ನಿಲ್ಲಿಸಿ  ಬೆಳಿಗ್ಗೆ 6 ಗಂಟೆಗೆ ಎದ್ದು ನೋಡಲಾಗಿ ತಮ್ಮ ವಾಹನಕ್ಕೆ ಅಳವಡಿಸಿರುವ ಅಮೆರಾನ್ ಕಂಪೆನಿಯ  2  ಬ್ಯಾಟರಿಯನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುವುದು ಗಮನಕ್ಕೆ ಬಂದಿದೆ. ಕಳುವಾದ ಎರಡು ಬ್ಯಾಟರಿಗಳ ಮೌಲ್ಯ 13.000ರೂ ಎಂದು ಅಂದಾಜಿಸಲಾಗಿದ್ದು, ವಿವಿಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ವಿವಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: