ಪ್ರಮುಖ ಸುದ್ದಿ

ರಾಜಕೀಯ ನಿವೃತ್ತಿ ಘೋಷಿಸಿದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ

ರಾಜ್ಯ(ಬೆಂಗಳೂರು)ಆ.1:- ಮುತ್ಸದ್ದಿ ರಾಜಕಾರಣಿ ಎಂದೇ ಹೆಸರಾಗಿರುವ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂದರ್ಭದಲ್ಲಿ ರಾಜಕೀಯ ನಿವೃತ್ತಿಯನ್ನು ಘೋಷಿಸಿದ್ದಾರೆ. ಚುನಾವಣಾ ರಾಜಕೀಯ ಸಾಕಾಗಿದೆ. ಸಾರ್ವಜನಿಕ ಜೀವನದಲ್ಲಿ ಹಲವು ವರ್ಷಗಳ ಕಾಲ ಹೋರಾಟದ ಬದುಕು ನಡೆಸಿದ್ದೇನೆ. ಜನಹಿತಕ್ಕಾಗಿ ಕೆಲಸ ಮಾಡಿದ ಸಮಾಧಾನ ಇದೆ. ಈಗ ವಯಸ್ಸಾಗಿದೆ ಹೋರಾಟ ಕೊಂಚ ಕಷ್ಟ. ಹಾಗಾಗಿ ರಾಜಕೀಯ ನಿವೃತ್ತಿಯ ನಿರ್ಧಾರ ಮಾಡಿದ್ದೇನೆ ಎಂದರು. ಮುಂದಿನ ದಿನಗಳಲ್ಲಿ ಯಾವುದೇ ಚುನಾವಣೆಗೆ ಸ್ಪರ್ಧೆ ಮಾಡದೆ ನಿವೃತ್ತ ಜೀವನ ತಮ್ಮದಾಗಲಿದೆ ಎಂದು ಅವರು ಹೇಳಿದರು.

ಅವಿವೇಕದ ಪರಮಾವಧಿ

ಪ್ರತ್ಯೇಕ ರಾಜ್ಯದ ಬೇಡಿಕೆ ಅವಿವೇಕದ ಪರಮಾವಧಿ ಎಂದು ಕಾಗೋಡು ತಿಮ್ಮಪ್ಪ ಅವರು ಇದೇ ಸಂದರ್ಭದಲ್ಲಿ ಪ್ರತಿಕ್ರಿಯಿಸಿದರು. ನಾಡಿನ ಹಲವು ಮಹನೀಯರ ತ್ಯಾಗ, ಹೋರಾಟದಿಂದ ರಾಜ್ಯ ಏಕೀಕರಣವಾಗಿದೆ. ರಾಜ್ಯವನ್ನು ಇಬ್ಭಾಗ ಮಾಡುವ ಮಾತನಾಡುವುದು ಸರಿಯಲ್ಲ. ಇದು ಅವಿವೇಕತನದ ಪರಮಾವಧಿ ಎಂದು ಹರಿಹಾಯ್ದರು.

ಉತ್ತರ ಕರ್ನಾಟಕ ಭಾಗದಿಂದ ಕೆಲವರಿಗೆ ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಪ್ರತ್ಯೇಕ ರಾಜ್ಯದ ಬಗ್ಗೆ ಮಾತನಾಡುವುದು ಸಲ್ಲದು. ಯಾವುದೇ ಸಮಸ್ಯೆಗಳಿದ್ದರೂ ಮಾತುಕತೆಗಳ ಮೂಲಕ ಬಗೆಹರಿಸಿಕೊಳ್ಳಬೇಕು. ಅದು ಬಿಟ್ಟು ಪ್ರತ್ಯೇಕ ರಾಜ್ಯದ ಮಾತನಾಡುವುದು ಸರಿಯಲ್ಲ ಎಂದು ಹೇಳಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: