ಕ್ರೀಡೆಮೈಸೂರು

ರಾಜಸ್ಥಾನ್ ತಂಡ ಮಣಿಸಿ ಚಾಂಪಿಯನ್ ಪಟ್ಟ ಪಡೆದ ಕರ್ನಾಟಕ

ಭಾರತೀಯ ಪ್ಯಾರಾಲಂಪಿಕ್ ವಾಲಿಬಾಲ್ ಫೆಡರೇಶನ್ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಸೀನಿಯರ್ ಸಿಟ್ಟಿಂಗ್ ಪ್ಯಾರಾ ವಾಲಿಬಾಲ್ ಟೂರ್ನಿಯಲ್ಲಿ ಕರ್ನಾಟಕ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಮೈಸೂರಿನ ಚಾಮುಂಡಿವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ 25-20, 22-25, 25-22, 25-22 ರಲ್ಲಿ ಕರ್ನಾಟಕ ತಂಡ ರಾಜಸ್ಥಾನ್ ತಂಡವನ್ನು ಮಣಿಸಿದೆ.

ಪಂದ್ಯವು ಆರಂಭದಲ್ಲೇ ಬಿರುಸಿನ ಪೈಪೋಟಿ ನೀಡಿದ್ದು, ಉಭಯ ತಂಡಗಳ ಆಟಗಾರರು ವಿಶೇಷ ಗಮನ ಸೆಳೆದರು. ಆತಿಥೇಯ ತಂಡಕ್ಕೆ ಎರಡನೇ ಸೆಟ್ ನಲ್ಲಿ ತಿರುಗೇಟು ನೀಡಿದ ರಾಜಸ್ತಾನ್ ತಂಡ 1-1 ಸಮಬಲ ಕಾಯ್ದುಕೊಂಡರು. ನಂತರ ಎರಡು ಸೆಟ್ ಜಯ ಗಳಿಸಿದರು.

ಇದಕ್ಕೂ ಮೊದಲು ನಡೆದ ಸೆಮಿಫೈನಲ್ ನಲ್ಲಿ ಕರ್ನಾಟಕ ತಂಡ 25-9, 25-7 ರಲ್ಲಿ ಮಹಾರಾಷ್ಟ್ರ ತಂಡವನ್ನು ಸೋಸಿಲಿತ್ತು. ಇನ್ನೊಂದು ಸೆಟ್ ನಲ್ಲಿ ಹರಿಯಾಣ ತಂಡವನ್ನು ರಾಜಸ್ಥಾನ್ ತಂಡದವರು 25-19, 16-25, 25-18 ರಲ್ಲಿ ಸೋಲಿಸಿದರು.

ಮೂರನೇ ಸ್ಥಾನಕ್ಕಾಗಿ ನಡೆದ ಹಣಾಹಣಿಯಲ್ಲಿ ಮಹಾರಾಷ್ಟ್ರ ತಂಡವನ್ನು ಹರ್ಯಾಣ ತಂಡ 25-7, 25-6 ರಲ್ಲಿ ಸೋಲಿಸಿದರು.

Leave a Reply

comments

Related Articles

error: