ಕರ್ನಾಟಕ

ಕಿಚ್ಚ ಸುದೀಪ್ ವಿರುದ್ಧ ಫಿಲ್ಮಂ ಛೇಂಬರ್ ನಲ್ಲಿ ದೂರು ದಾಖಲು

ಬೆಂಗಳೂರು,ಆ.1-ಚಿತ್ರೀಕರಣಕ್ಕಾಗಿ ಬಳಸಿಕೊಂಡಿದ್ದ ಕಾಫಿ ತೋಟದ ನಷ್ಟವನ್ನು ನೀಡಿಲ್ಲವೆಂದು ಕಿಚ್ಚ ಸುದೀಪ್ ವಿರುದ್ಧ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ದಾಖಲಾಗಿದೆ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ `ವಾರಸ್ದಾರ’ ಧಾರಾವಾಹಿ ಕಿಚ್ಚ ಕ್ರಿಯೇಷನ್ ಅಡಿಯಲ್ಲಿ ನಿರ್ಮಾಣವಾಗಿತ್ತು. ಟಿಆರ್ ಪಿ ಕಳೆದುಕೊಂಡ ಹಿನ್ನಲೆಯಲ್ಲಿ ಧಾರಾವಾಹಿ ಅರ್ಧಕ್ಕೆ ನಿಂತು ಹೋಯಿತು.

ಚಿಕ್ಕಮಗಳೂರಿನ ಬಳಿ ಕಾಫಿ ತೋಟವೊಂದರಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಚಿತ್ರೀಕರಣಕ್ಕಾಗಿ ಧಾರಾವಾಹಿ ತಂಡ ಕಾಫಿ ತೋಟದಲ್ಲಿದ್ದ ಅನೇಕ ಮರಗಳನ್ನು ಕತ್ತರಿಸಿ ಧಾರಾವಾಹಿ ಸೆಟ್ ನಿರ್ಮಾಣ ಮಾಡಿಕೊಂಡಿತ್ತು. ನಂತರ ಅದರ ವೆಚ್ಚವನ್ನು ಭರಿಸುವುದಾಗಿ ಧಾರಾವಾಹಿ ತಂಡ ಭರವಸೆ ನೀಡಿದ್ದರು. ಆದರೆ ಧಾರಾವಾಹಿ ಯಾವುದೇ ವೆಚ್ಚ ಭರಿಸಿಲ್ಲ ಎಂದು ಇದೀಗ ತೋಟದ ಮಾಲೀಕ ದೀಪಕ್ ಮಯೂರ್ ಪಟೇಲ್ ಸಿಎಂ ಹಾಗೂ ಫಿಲ್ಮಂ ಛೇಂಬರ್ ಗೆ ದೂರು ನೀಡಿದ್ದಾರೆ.

ಕಿಚ್ಚ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಾಣ ಆಗಿದ್ದವಾರಸ್ದಾರಧಾರಾವಾಹಿ ಚಿತ್ರೀಕರಣಕ್ಕಾಗಿ ತೋಟದ ಜಾಗ ಬಳಸಿಕೊಂಡು. ಅಲ್ಲಿದ್ದ ಬೆಳೆಯನ್ನು ನಾಶ ಮಾಡಿ ಸೆಟ್ ನಿರ್ಮಾಣ ಮಾಡಿದ್ದರು. ನಂತರ ಅದಕ್ಕೆ ತಕ್ಕನಾದ ಹಣವನ್ನು ನೀಡುವುದಾಗಿ ಕಿಚ್ಚ ಕ್ರಿಯೇಷನ್ಸ್ ಸಿಬ್ಬಂದಿ ತಿಳಿಸಿದ್ದರಂತೆ. ಆದರೆ ಈಗ ಯಾವುದೇ ಹಣ ಪಾವತಿ ಮಾಡದೇ ನಷ್ಟ ಮಾಡಿದ್ದಾರೆ ಎಂದು ದೀಪಕ್ ಮಯೂರ್ ಹೇಳಿದ್ದಾರೆ.

ಎರಡುವರೆ ಎಕರೆಯಲ್ಲಿ ಬೆಳೆದಿದ್ದ ಕಾಫಿ ಮತ್ತು ಮೆಣಸಿನ ಗಿಡವನ್ನು ಸಂಪೂರ್ಣವಾಗಿ ಧಾರಾವಾಹಿ ತಂಡದವರು ನಾಶ ಮಾಡಿದ್ದಾರೆ. ಇದರಿಂದ ಒಂದೂವರೆ ಕೋಟಿ ನಷ್ಟವಾಗಿದೆ. ಇದೇ ವಿಚಾರವಾಗಿ ಸುದೀಪ್ ಅವರ ಮ್ಯಾನೇಜರ್ ಅವರನ್ನು ಸಂಪರ್ಕ ಮಾಡಿದರೆ ಸರಿಯಾಗಿ ಉತ್ತರ ನೀಡುತ್ತಿಲ್ಲ ಎಂದು ಕಾಫಿ ದೀಪಕ್ ಆರೋಪಿಸಿದ್ದಾರೆ.

ವಾರಸ್ದಾರಧಾರಾವಾಹಿ ತಂಡಕ್ಕೂ ಹಾಗೂ ಸುದೀಪ್ ಅವರಿಗೆ ಸರಿಯಾದ ಹೊಂದಾಣಿಕೆ ಆಗದ ಕಾರಣ ಸುದೀಪ್ ನಿರ್ಮಾಣದಿಂದ ಹೊರ ಬಂದಿದ್ದರು ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಆದರೆ ಇದು ಎಷ್ಟರ ಮಟ್ಟಿಗೆ ಸತ್ಯ ಎನ್ನುವುದು ಮಾತ್ರ ತಿಳಿಯಬೇಕಿದೆ. ಸದ್ಯ ಇದು ಯಾರಿಂದ ಆಗಿರುವ ತಪ್ಪು ಎನ್ನುವ ವಿಚಾರ ಹೊರ ಬರಬೇಕಿದೆ. (ಎಂ.ಎನ್)

 

Leave a Reply

comments

Related Articles

error: