ಕರ್ನಾಟಕಪ್ರಮುಖ ಸುದ್ದಿ

ಯಲಹಂಕ ರೈಲ್ವೇ ಗಾಲಿ ಕಾರ್ಖಾನೆ: ಅಪ್ರೆಂಟಿಸ್ ತರಬೇತಿಗಾಗಿ ಅರ್ಜಿ ಆಹ್ವಾನ

ಹಾಸನ (ಆ.1): ಬೆಂಗಳೂರಿನ ಯಲಹಂಕದಲ್ಲಿರುವ ರೈಲ್ವೆ ವೀಲ್ ಕಾರ್ಖಾನೆ 2018-19ನೇ ಸಾಲಿನಲ್ಲಿ ಅಪ್ರೆಂಟಿಸ್ ತರಬೇತಿಗಾಗಿ 192 ಅಭ್ಯರ್ಥಿಗಳನ್ನು ಐಟಿಐ ಪಾಸಾದ ಫಿಟ್ಟರ್, ಮೆಷಿನಿಸ್ಟ್, ಎಂ.ಎಂ.ವಿ, ಟರ್ನರ್. ಸಿ.ಎನ್.ಸಿ, ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರಾನಿಕ್ ಮೆಕ್ಯಾನಿಕ್ ಎನ್‍ಸಿಟಿವಿಟಿ (NCTVT) ಅನುಮತಿ ಪಡೆದ ಟ್ರೇಡ್‍ಗಳಿಗೆ ಒಂದು ವರ್ಷದ ಅವಧಿಯ ತರಬೇತಿಗಾಗಿ ಅರ್ಜಿ ಅಹ್ವಾನಿಸಿದೆ. ತರಬೇತಿ ಅವಧಿಯಲ್ಲಿ ತಿಂಗಳಿಗೆ ರೂ. 6841/- ಸಿ ಎನ್ ಸಿ ರವರಿಗೆ ರೂ. 6081/- ಸೈಫಂಡ್ ನೀಡಲಾಗುತ್ತದೆ.

ವಯೋಮಿತಿ 15 ರಿಂದ 24 ವರ್ಷಗಳು ಪರಿಶಿಷ್ಟಜಾತಿ/ಪರಿಶಿಷ್ಟ ಪಂಗಡ/ಓ.ಬಿ.ಸಿ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ರಿಯಾಯಿತಿ ಇರುತ್ತದೆ. ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಹಾಸನ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯಲ್ಲಿ ಅಥವಾ ವೆಬ್ ಸೈಟ್ www.rwf.indianrailways.gov.in ಅಲ್ಲಿ ಪಡೆಯಬಹುದು.

ಅರ್ಜಿ ಸಲ್ಲಿಸಲು ಕಡೆ ದಿನಾಂಕ: 13/08/2018 ಆಸಕ್ತರು ವಿದ್ಯಾರ್ಹತೆ ಹಾಗೂ ಜಾತಿ ಪ್ರಮಾಣ ಪತ್ರ, ಇತ್ತೀಚಿನ ಭಾವಚಿತ್ರದೊಂದಿಗೆ ಖುದ್ದಾಗಿ ಹೆಸರು ನೋಂದಾಯಿಸಿ ಅರ್ಜಿ ಸಲ್ಲಿಸಬೇಕಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಉದ್ಯೋಗಾಧಿಕಾರಿ, ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಹಾಸನ ಇವರನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ 08172-268374 ಅನ್ನು ಸಂಪರ್ಕಿಸಿ ಮಾಹಿತಿ ಪಡೆಯಲು ಉದೋಗಾಧಿಕಾರಿಗಳಾದ ಜೆ.ಬಿ.ವಿಜಯಲಕ್ಷ್ಮೀ ಅವರು ತಿಳಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: