ಮೈಸೂರು

ರಾಷ್ಟ್ರೀಯ ಪ್ರಕೃತಿ ಸಾಕ್ಷ್ಯ ಚಲನಚಿತ್ರೋತ್ಸವ: ಮೈಸೂರು ವಿವಿಯ 3 ಚಿತ್ರಗಳು ಆಯ್ಕೆ

ರಾಷ್ಟ್ರೀಯ ಪ್ರಕೃತಿ ಸಾಕ್ಷ್ಯ ಚಿತ್ರಗಳ ಚಲನಚಿತ್ರೋತ್ಸವಕ್ಕೆ ಮೈಸೂರು ವಿವಿಯ 3 ಚಿತ್ರಗಳು ಆಯ್ಕೆಯಾಗಿವೆ.

ವಿವಿಯ ಶೈಕ್ಷಣಿಕ ಬಹುಮಾಧ್ಯಮ ಸಂಶೋಧನಾ ಕೇಂದ್ರವು ನಿರ್ಮಿಸಿರುವ ಸಾಕ್ಷ ಚಿತ್ರಗಳು ರಾಷ್ಟ್ರೀಯ ಪ್ರಕೃತಿ ಸಾಕ್ಷ್ಯ ಚಿತ್ರಗಳ ಚಲನಚಿತ್ರೋತ್ಸವ 2016ಕ್ಕೆ ಆಯ್ಕೆಯಾಗಿವೆ.

ಡಿ. 28 ರಿಂದ 30 ರ ವರೆಗೆ ಚಂಡೀಗಢದ ನ್ಯಾಷನಲ್ ಇನ್‍ಸ್ಟಿಟೂಟ್ ಆಫ್ ಟೆಕ್ನಿಕಲ್ ಟೀಚರ್ ಟ್ರೈನಿಂಗ್ ಅಂಡ್ ರಿಸರ್ಚ್ ಸೆಂಟರ್‍ ಅಲ್ಲಿ ಚಲನಚಿತ್ರೋತ್ಸವ ನಡೆಯಲಿದೆ.

ಮೈಸೂರು ವಿವಿಯ ಪರಿಸರ ವಿಭಾಗದಿಂದ ನಿರ್ಮಿಸಲ್ಪಟ್ಟ ಡಿಜಿಡಬ್ಲ್ಯೂಟಿ-ಎ ಕಾಸ್ ಫಾರ್ ಕನ್ಸರ್ನ್, ಗುರುಕಾಕ್ – ದಿ ಗ್ರೀನ್ ಮ್ಯಾನ್ ಹಾಗೂ ಅಭಿವೃದ್ಧಿ ವಿಭಾಗದಲ್ಲಿ ಹೆಜ್ಜೆ ಟೆಕ್ನಾಲಜಿ ಮೀಟ್ಸ್ ಬಡಿಪುರ ವೈಲ್ಡ್‍ಲೈಫ್ ಸಾಕ್ಷ್ಯ ಚಿತ್ರಗಳೇ ಚಿತ್ರೋತ್ಸವಕ್ಕೆ ಆಯ್ಕೆಯಾಗಿವೆ.

ಚಿತ್ರೋತ್ಸವವನ್ನು ವಿವಿಯ ಧನಸಹಾಯ ಆಯೋಗ ಹಾಗೂ ಕನ್ಸೋರ್ಟಿಯಂ ಫಾರ್‍ ಎಜುಕೇಷನಲ್ ಕಮ್ಯುನಿಕೇಷನ್ ಆಯೋಜಿಸಿದೆ.

Leave a Reply

comments

Related Articles

error: