ಕರ್ನಾಟಕಮೈಸೂರು

‘ಜ.27’ರಂದು ರಾಜ್ಯಮಟ್ಟದ ಶೈಕ್ಷಣಿಕ ಸಮ್ಮಿಲನ ಕಾರ್ಯಕ್ರಮ

ಶಿಕ್ಷಣ ಶಿಲ್ಪಿ ಶೈಕ್ಷಣಿಕ ಮಾಸಪತ್ರಿಕೆ ವಾರ್ಷಿಕೋತ್ಸವ ಹಾಗೂ ರಾಜ್ಯಮಟ್ಟ ಶೈಕ್ಷಣಿಕ ಸಮ್ಮಿಲನ ಕಾರ್ಯಕ್ರಮವನ್ನು2017ರ ಜನವರಿ 27 ಮತ್ತು 28ರಂದು ಮಂಗಳೂರಿನಲ್ಲಿ ನಡೆಯಲಿದೆ ಎಂದು ಸಮಿತಿ ಕಾರ್ಯದರ್ಶಿ ಈ ಬಸವರಾಜು ತಿಳಿಸಿದ್ದಾರೆ.

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯಿಂದ ಹಮ್ಮಿಕೊಂಡಿರುವ 2 ದಿನಗಳ ಸಮಾವೇಶದಲ್ಲಿ ಸರ್ಕಾರಿ ಶಾಲೆ ಉಳಿಸಿ ಅಭಿಯಾನ, ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುವ ಶಿಕ್ಷಕರಿಗೆ ಹಾಗೂ ನೌಕರರಿಗೆ ಪ್ರೋತ್ಸಾಹ, ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ 10 ಮಂದಿ ಶಿಕ್ಷಕರಿಗೆ ಶಿಕ್ಷಣ ಶಿಲ್ಪಿ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು. ಇದಕ್ಕಾಗಿ ಶಿಕ್ಷಕರಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹತೆ : ಶಿಕ್ಷಕರು ಕನಿಷ್ಠ 20 ವರ್ಷ ಸೇವೆ ಸಲ್ಲಿಸಿರುವುದ ಕಡ್ಡಾಯ, ಸ್ವವಿವರಗಳೊಂದಿಗೆ ಡಿ.31ರೊಳಗೆ ಅರ್ಜಿಯನ್ನು ಕಾರ್ಯದರ್ಶಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ನಂ.856, 6ನೇ ಕರಾಸ್,3ನೇ ಮುಖ್ಯರಸ್ತೆ, ಪ್ರಕಾಶನಗರ, ಬೆಂಗಳೂರು-560021 ಇಲ್ಲಿಗೆ ಕಳುಹಿಸಬೇಕು.

ಕಾರ್ಯಕ್ರಮದಲ್ಲಿ ಪ್ರಯೋಶೀಲ ಶಿಕ್ಷಕರ ಸೇವೆಯ ಅನಾವರಣ, ಸರಳ ವಿಜ್ಞಾನ ಕಾರ್ಯಾಗಾರ, ‘ಮಗು ಸ್ನೇಹಿ ಶಾಲೆ’ ವಿಷಯ ಕುರಿತು ಚರ್ಚೆ, ಸಂವಾದ, ವಿಚಾರಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ. ಸಮಾವೇಶದಲ್ಲಿ ಭಾಗವಿಸಲಿಚ್ಚಿಸುವ ಶಿಕ್ಷಕರು ಡಿ.31ರೊಳಗೆ 200 ರೂ.ಪ್ರತಿನಿಇ ಶುಲ್ಕ ಪಾವತಿ ಹೆಸರು ನೋಂದಾಯಿಸಿಕೊಳಳಬಹುದು. ಹೆಚ್ಚಿನ ಮಾಹಿತಿಗಾಗಿ ಮೊ.ಸಂ. 9448957666 ಅನ್ನು ಸಂಪರ್ಕಿಸಬಹುದು.

 

Leave a Reply

comments

Related Articles

error: