ಕರ್ನಾಟಕ

ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ

ರಾಜ್ಯ(ಬೆಂಗಳೂರು)ಆ.1:- ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಬಂಧಿಸಿರುವ ಕೊತ್ತನೂರು ಪೊಲೀಸರು 3 ಕೆಜಿ. 100 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಸಂಪಿಗೆ ಹಳ್ಳಿಯ ಬಸವಲಿಂಗಪ್ಪ ನಗರದ ಕ್ರಿಸ್ಟಿ ಬಿನ್ನಿ (21), ಬಂಧಿತ ಆರೋಪಿಯಾಗಿದ್ದಾನೆ. ಬಂಧಿತನಿಂದ 60 ಸಾವಿರ ಮೌಲ್ಯದ 100ಕೆ.ಜಿ. 100 ಗ್ರಾಂ ಗಾಂಜಾ, ಚವರ್‌ಲೆಟ್ ಕಾರು, 2000 ನಗದು, ಮೊಬೈಲ್‌ನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯ ಜೊತೆ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಮತ್ತೊಬ್ಬ ಆರೋಪಿ ನೋಬರ್ಟ್ ಪರಾರಿಯಾಗಿದ್ದು, ಆತನಿಗಾಗಿ ಶೋಧ ನಡೆಸಲಾಗಿದೆ.

ಆರೋಪಿಯು ಕೆ. ನಾರಾಯಣಪುರದ ಕ್ರಿಸ್ತ ಕಾಲೇಜು ಬಳಿ ಕಾರಿನಲ್ಲಿ ಬಂದು ವಿದ್ಯಾರ್ಥಿಗಳು ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದಾಗ ಕಾರ್ಯಾಚರಣೆ ನಡೆಸಿದ ಕೊತ್ತನೂರು ಪೊಲೀಸರು ಬಂಧಿಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಕಲಾ ಕೃಷ್ಣಸ್ವಾಮಿ ತಿಳಿಸಿದ್ದಾರೆ.

ಆರೋಪಿ ಕ್ರಿಸ್ಟಿ ಹಾಗೂ ಪರಾರಿಯಾಗಿರುವ ನೋಬರ್ಟ್ ಕ್ರಿಸ್ತ ಕಾಲೇಜಿನ ಹಳೆಯ ವಿದ್ಯಾರ್ಥಿಗಳಾಗಿರುವುದು ವಿಚಾರಣೆಯಲ್ಲಿ ತಿಳಿದು ಬಂದಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: