ಪ್ರಮುಖ ಸುದ್ದಿ

ಶಾಸನದ ಮೇಲೆ ಮೈತ್ರಿ ಸರ್ಕಾರದ ಆಡಳಿತ ನಡೆಯುತ್ತಿಲ್ಲ,‘ಶಾಸ್ತ್ರ’ದ ಪ್ರಕಾರ ನಡೆಯುತ್ತಿದೆ : ಕೋಟಾ ಶ್ರೀನಿವಾಸ್ ಪೂಜಾರಿ ವ್ಯಂಗ್ಯ

ರಾಜ್ಯ(ಬೆಂಗಳೂರು)ಆ.1:- ಶಾಸನದ ಮೇಲೆ ಮೈತ್ರಿ ಸರ್ಕಾರದ ಆಡಳಿತ ನಡೆಯುತ್ತಿಲ್ಲ. ಬದಲಾಗಿ ‘ಶಾಸ್ತ್ರ’ದ ಪ್ರಕಾರ ಆಡಳಿತ ನಡೆಯುತ್ತಿದೆ ಎಂದು ಪರಿಷತ್ ವಿಪಕ್ಷನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ವ್ಯಂಗ್ಯವಾಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಕೋಟಾ ಶ್ರೀನಿವಾಸಪೂಜಾರಿ, ಘಳಿಗೆ, ಗಂಡಾಂತರ, ರಾಹುಕಾಲ,ಗುಳಿಕಾಲ ಎಂದು ನೋಡುತ್ತ  ಹೆಚ್.ಡಿ ರೇವಣ್ಣ ಎಲ್ಲಾ ಕೆಲಸ ಮಾಡುತ್ತಾರೆ. ಘಳಿಗೆ  ನೋಡುತ್ತಾ ಸದನ ಮುಂದೂಡುತ್ತಾ ಬರುತ್ತಿದ್ದಾರೆ. ಉಸ್ತುವಾರಿ ಸಚಿವರ ನೇಮಕಕ್ಕೂ ಶಾಸ್ತ್ರ ನೋಡುವ ಪರಿಸ್ಥಿತಿ ಬಂದಿದೆ. ಹೀಗೆ ಶಾಸನದ ಬದಲು ಶಾಸ್ತ್ರದ ಪ್ರಕಾರ ಆಡಳಿತ ನಡೆಯುತ್ತಿದೆ ಎಂದು ಟಾಂಗ್ ಕೊಟ್ಟರು.

ಇದೇ ವೇಳೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರನ್ನು ಕುಟುಕಿದ ಶ್ರೀನಿವಾಸ ಪೂಜಾರಿ ನೀವು ಹೊಣೆಗೇಡಿತನದಿಂದ ಮಾತನಾಡುವುದು ನಿಲ್ಲಿಸಿ. ತಾರತಮ್ಯ ಮಾಡುವುದನ್ನು ಪಲಾಯನ ಸೂತ್ರವನ್ನು ಅನುಸರಿಸಬೇಡಿ. ಅಪಸ್ವರ, ಆಕ್ರೋಶ ಇದ್ದ ಜನ ಪ್ರತಿನಿಧಿಗಳನ್ನು ಕರೆಸಿ ಮಾತನಾಡಿ. ಪ್ರತ್ಯೇಕತೆ ಧನಿಗೆ ಸಿಎಂ ಕುಮಾರಸ್ವಾಮಿ ಕಾರಣವೆಂದು ಅವರು ಆಕ್ರೋಶ ವ್ಯಕ್ತಪಡಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: