ಮೈಸೂರು

ಕನ್ನಡವನ್ನು ಪಸರಿಸುವ ಕಾರ್ಯಕ್ರಮವನ್ನು ಪ್ರೇಕ್ಷಕರು ಪ್ರೋತ್ಸಾಹಿಸಿ: ಹೆಚ್.ಆರ್.ಲೀಲಾವತಿ

ಮೈಸೂರಿನ ಸರಸ್ವತಿಪುರಂನಲ್ಲಿರುವ ಜವರೇಗೌಡ ಉದ್ಯಾನದಲ್ಲಿ ಕನ್ನಡ ನಾಡು-ನುಡಿ ಗೀತೆಗಳ ಭಾವಾಭಿಯಾನ ಕಾರ್ಯಕ್ರಮ ಜರುಗಿತು.

ಅಖಿಲ ಕರ್ನಾಟಕ ಸುಗಮ ಸಂಗೀತ ಸಂಸ್ಥೆಗಳ ಒಕ್ಕೂಟ ಹಾಗೂ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸಹಯೋಗದಲ್ಲಿ ನಡೆದ ಭಾವಾಭಿಯಾನ ಕಾರ್ಯಕ್ರಮವನ್ನು ಗಾಯಕಿ ಹೆಚ್.ಆರ್.ಲೀಲಾವತಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕನ್ನಡವನ್ನು ಎಲ್ಲೆಡೆ ಪಸರಿಸುವ ಇಂತಹ ಕಾರ್ಯಕ್ರಮವನ್ನು ಪ್ರೇಕ್ಷಕರು ಪ್ರೋತ್ಸಾಹಿಸಬೇಕು. ಈ ಕಾರ್ಯಕ್ರಮದಲ್ಲಿ ಗಾಯಕರು ಕನ್ನಡ ಗೀತೆಗಳ ರಸದೌತಣವನ್ನು ನೀಡುತ್ತಿದ್ದು, ಇದು ರಾಜ್ಯದ ಮೂಲೆ ಮೂಲೆಗೂ ತಲುಪುವಂತಾಗಬೇಕು ಎಂದು ಹೇಳಿದರು.

ಮಹಾನ್ ಕವಿಗಳಾದ ಕುವೆಂಪು, ಕೆ.ಎಸ್. ನಿಸಾರ್ ಅಹ್ಮದ್ ಅವರ ಎಲ್ಲಾದರೂ ಇರು.. ಎಂತಾದರೂ ಇರು… ಜೋಗದ ಸಿರಿ ಬೆಳಕಿನಲ್ಲಿ ಹಾಡುಗಳು ಸಂಗೀತಪ್ರಿಯರಲ್ಲಿ ಕನ್ನಡಾಭಿಮಾನ ಮೂಡಿಸಿತು.

ಪಂಚಮ್ ಹಳಿಬಂಡಿ, ಜಿ. ಪುಷ್ಪಲತಾ, ಸ್ನೇಹಶ್ರೀ, ಶ್ರೇಯಾ ಕೆ.ಭಟ್ ಮೊದಲಾದ ಗಾಯಕರ ಸುಶ್ರಾವ್ಯ ಕಂಠದಿಂದ ಕನ್ನಡಾಭಿಮಾನವನ್ನು ಮೂಡಿಸುವ ಗೀತೆಗಳು ಹೊರಹೊಮ್ಮಿದವು.

ವೇದಿಕೆಯಲ್ಲಿ ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಗೌರವಾಧ್ಯಕ್ಷ ವೈ.ಕೆ. ಮುದ್ದುಕೃಷ್ಣ, ಮಹಾನಗರಪಾಲಿಕೆ ಸದಸ್ಯ ಆರ್. ಲಿಂಗಪ್ಪ, ಕರ್ನಾಟಕ ಸುಗಮ ಸಂಗೀತ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಆನಂದ ಮಾದಲಗೆರೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: