
ಮೈಸೂರು
ಬಂದೂಕು ಜೊತೆ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ
ಬಂದೂಕು ಕಳವು ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ರಾಮಾಪುರ ಠಾಣಾ ಪೊಲೀಸರು ಮಾಲು ಸಮೇತ ಬಂಧಿಸಿದ್ದಾರೆ.
ಕರೆದೊಡ್ಡಿ ನಿವಾಸಿಯಾಗಿರುವ ಮಾದೇಶ್ ಅಲಿಯಾಸ್ ಮೂಸ (37) ಇತ್ತೀಚಿಗೆ ಮಹದೇಶ್ವರ ವನ್ಯಜೀವಿ ಧಾಮದಲ್ಲಿ ನಡೆದ ಕಳ್ಳಬೇಟೆ ತಡೆ ಶಿಬಿರದಿಂದ ಬಂದೂಕನ್ನು ಕದ್ದು ಪರಾರಿಯಾಗಿದ್ದ. ಈತನೊಂದಿಗೆ ಶಾಮೀಲಾಗಿದ್ದ ಇನ್ನೊಬ್ಬ ಆರೋಪಿಗಾಗಿ ಪೊಲೀಸರು ತೀವ್ರ ಬಲೆ ಬೀಸಿದ್ದಾರೆ.