
ಕರ್ನಾಟಕ
ಶ್ರೀಓಂಕಾರೇಶ್ವರ ದೇವಾಲಯದ ಆವರಣದಲ್ಲಿ ಭತ್ತದ ನಾಟಿ ಕಾರ್ಯ
ರಾಜ್ಯ(ಮಡಿಕೇರಿ) ಆ.1 :- ಓಂಕಾರೇಶ್ವರ ದೇವಾಲಯದಲ್ಲಿ ಬುಧವಾರ ಮುಂಬರುವ ಹುತ್ತರಿ ಹಬ್ಬಕ್ಕಾಗಿ ಭತ್ತದ ತೆನೆಯನ್ನು (ಕದಿರು) ತೆಗೆಯುವ ಉದ್ದೇಶಕ್ಕಾಗಿ ಭತ್ತದ ಸಸಿ ನೆಡಲಾಯಿತು.
ವ್ಯವಸ್ಥಾಪನಾ ಸಮಿತಿ ಹಾಗೂ ಕೊಡಗು ಜಾನಪದ ಪರಿಷತ್ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಪುಲಿಯಂಡ ಕೆ.ಜಗದೀಶ್, ಸದಸ್ಯರಾದ ಸುನಿಲ್ ಕೆ., ಕಾರ್ಯನಿರ್ವಹಣಾಧಿಕಾರಿ ಸಂಪತ್ ಕುಮಾರ್ ಅವರು ಹಾಗೂ ಮಾಜಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ರಮೇಶ್ ಹೊಳ್ಳ, ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಅನಂತಶಯನ, ಉಪಾಧ್ಯಕ್ಷರಾದ ಅಂಬೆಕಲ್ಲು ಕುಶಾಲಪ್ಪ, ಕೃಪಾ ದೇವರಾಜ್, ಕವಿತಾ, ರಾಧಿಕಾ, ಶಿವು ಮತ್ತು ವಾಸು ಪುಟ್ಟಯ್ಯ, ಕುಶ, ಅಣ್ಣಪ್ಪ ಹಾಜರಿದ್ದರು.
ಪರಂಪರೆಯಿಂದ ನಡೆದು ಬರುವ ಹುತ್ತರಿ ಹಬ್ಬವನ್ನು ಆಚರಿಸಲು ಸಾಂಪ್ರದಾಯಿಕವಾದ ಗ್ರಾಮೀಣ ಪ್ರದೇಶದಲ್ಲಿ ಭತ್ತದ ಸಸಿ ನೆಡುವ ಕಾರ್ಯಕ್ರಮ ಇದಾಗಿದ್ದು, ನಾಟಿಯನ್ನು ಮಾಡಲಾಗಿದೆ ಎಂದು ಜಾನಪದ ಪರಿಷತ್ತಿನ ಅಧ್ಯಕ್ಷ ಅನಂತಶಯನ ತಿಳಿಸಿದರು. ಈ ಹಿಂದಿನಿಂದಲೂ ಬಂದ ಸಂಪ್ರದಾಯವನ್ನು ದೇವಸ್ಥಾನದಲ್ಲಿ ನಡೆಸುವ ರೀತಿಯಲ್ಲಿ ಈ ವರ್ಷವೂ ನಾಟಿ ಮಾಡಲಾಗಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷರು ಹೇಳಿದರು. (ಕೆಸಿಐ,ಎಸ್.ಎಚ್)