ಮೈಸೂರು

ಸಂಚಾರ ನಿಯಮ ಉಲ್ಲಂಘನೆ ಪ್ರಕರಣ : ಸ್ಕೂಟರ್ ಮಾಲೀಕ ಕಟ್ಟಬೇಕಿದೆ 63,500ರೂ.ದಂಡ!

ಮೈಸೂರು,ಆ.2:- ಸಂಚಾರ ನಿಯಮ ಉಲ್ಲಂಘನೆ ತಪಾಸಣೆಗಿಳಿದ ಪೊಲೀಸರಿಗೆ 635 ಪ್ರಕರಣಗಳಿರುವ ಸ್ಕೂಟರ್ ಒಂದು ಕಾಣಸಿಕ್ಕಿದ್ದು, ಅವರು ಪಾವತಿಸಬೇಕಾದ ದಂಡ ಬರೋಬ್ಬರಿ 63,500ರೂ.

ಎನ್.ಆರ್.ಸಂಚಾರ ಪೊಲೀಸರು ನಿನ್ನೆ ಮಧ್ಯಾಹ್ನ ಆಯುರ್ವೇದಿಕ್ ವೃತ್ತದಲ್ಲಿ ತಪಾಸಣೆ ಮಾಡುತ್ತಿದ್ದಾಗ ಮಾಲೀಕ ಮಧುಕುಮಾರ್ ಎಂಬವರಿಗೆ ಸೇರಿದ ಹೋಂಡಾ ಆ್ಯಕ್ಟೀವಾ ಸ್ಕೂಟರ್ ನ್ನು ತಪಾಸಣೆ ನಡೆಸಿದಾಗ ಶಾಕ್ ಆಗಿದೆ. ಸ್ಕೂಟರ್ ಮೇಲೆ 635 ಪ್ರಕರಣಗಳಿದ್ದು, 63,500ರೂ.ದಂಡ ಪಾವತಿಸಬೇಕಿದೆ. ಈ ವಾಹನವನ್ನು ಮಾರಿದರೂ ಅಷ್ಟು ಹಣ ಸಿಗಲಾರದು. ದಂಡ ವಸೂಲಾತಿಗೆ ಪರ್ಯಾಯ ಮಾರ್ಗ ಹುಡುಕಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಇದುವರೆಗೂ ಇಷ್ಟು ದೊಡ್ಡ ಮೊತ್ತದ ದಂಡವಿರುವ ವಾಹನ ಪತ್ತೆಯಾಗಿರಲಿಲ್ಲವೆಂದು ಪೊಲೀಸರು ತಿಳಿಸಿದ್ದು, ಕಾರ್ಯಾಚರಣೆ ವೇಳೆ ಸಂಚಾರ ಠಾಣೆ ಪೊಲೀಸ್ ಇನ್ಸಪೆಕ್ಟರ್ ಎನ್.ಜಯಕುಮಾರ್, ಸಹಾಯಕ ಉಪ ಪೊಲೀಸ್ ನಿರೀಕ್ಷಕ ಎಂ.ದೀಪಕ್, ಕಾನ್ಸಟೇಬಲ್ ಎನ್.ನಾರಾಯಣ ಸ್ವಾಮಿ ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: