ದೇಶ

ಹೈದರಾಬಾದ್: ವಿಮಾನದಲ್ಲಿ ಬೆಂಕಿ; 149 ಪ್ರಯಾಣಿಕರು ಪಾರು

ಹೈದರಾಬಾದ್,.2-ಲ್ಯಾಂಡಿಂಗ್ ವೇಳೆ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡು ಪೈಲಟ್ ನ ಸಮಯ ಪ್ರಜ್ಞೆಯಿಂದಾಗಿ 149 ಪ್ರಯಾಣಿಕರು ಪಾರಾಗಿದ್ದಾರೆ.

ಇಲ್ಲಿನ ಶಂಶಾಬಾದ್ನಲ್ಲಿರುವ ರಾಜೀವ್ಗಾಂಧಿ ಅಂತಾರಾಷ್ಟ್ರೀಯ ವಿಮಾಣ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ 5.15ರ ಸುಮಾರಿಗೆ ಈ ಘಟನೆ ನಡೆದಿದೆ. ಕುವೈತ್ ನಿಂದ ಹೈದರಾಬಾದ್ಗೆ ಆಗಮಿಸಿದ್ದ 149 ಪ್ರಯಾಣಿಕರಿದ್ದ ಜಝೀರಾ ಏರ್ವೇಸ್ ವಿಮಾನ ಲ್ಯಾಂಡಿಂಗ್ ಆಗುತ್ತಿದ್ದ ವೇಳೆ ಇಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡಿತು. ತಕ್ಷಣವೇ ಎಚ್ಚೆತ್ತ ಪೈಲಟ್ ವಿಮಾನವನ್ನು ರನ್ವೇಯಲ್ಲಿ ನಿಲ್ಲಿಸಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕದಳಗಳು ಬೆಂಕಿ ನಂದಿಸಿದವು. ವಿಮಾನದ ತಪಾಸಣೆ ನಡೆಸುತ್ತಿದ್ದು ಇಂಜಿನ್ಗೆ ಬೆಂಕಿ ಹತ್ತಿಕೊಳ್ಳಲು ಕಾರಣ ಏನೆಂದು ಇನ್ನೂ ತಿಳಿದಿಲ್ಲ. (ಎಂ.ಎನ್)

Leave a Reply

comments

Related Articles

error: