ದೇಶ

ರಾಜಕೀಯ ಪಕ್ಷಗಳು 2 ಸಾವಿರ ರೂ. ಮೀರಿದ ದೇಣಿಗೆ ಪಡೆಯುವುದನ್ನು ನಿಷೇಧಿಸಿ: ಚುನಾವಣಾ ಆಯೋಗ

ಚುನಾವಣೆಯಲ್ಲಿ ಕಾಳಧನವು ಬಳಕೆಯಾಗದಂತೆ ತಡೆಯುವ ಸಲುವಾಗಿ ರಾಜಕೀಯ ಪಕ್ಷಗಳಿಗೆ 2 ಸಾವಿರ ರುಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ಅನಾಮಧೇಯ ದೇಣಿಗೆ ನೀಡುವುದನ್ನು ನಿಷೇಧಿಸಲು ಕಾನೂನು ತಿದ್ದುಪಡಿ ಮಾಡುವಂತೆ ಚುನಾವಣಾ ಆಯೋಗವು ಕೇಂದ್ರ ಸರಕಾರವನ್ನು ಒತ್ತಾಯಿಸಿದೆ.

ಒಂದು ವೇಳೆ ಈ ಪ್ರಸ್ತಾವನೆಯನ್ನು ಸರಕಾರವು ಒಪ್ಪಿಕೊಂಡ ಪಕ್ಷದಲ್ಲಿ, ರಾಜಕೀಯ ಪಕ್ಷಗಳು ಚುನಾವಣಾ ಸಮಯದಲ್ಲಿ ಲೆಕ್ಕವಿಲ್ಲದ ದೇಣಿಗೆ ಪಡೆಯುವುದು ಕಡಿಮೆಯಾಗುತ್ತದೆ.

ಅನಾಮಧೇಯರಿಂದ ದೇಣಿಗೆ ಸ್ವೀಕರಿಸಲು ರಾಜಕೀಯ ಪಕ್ಷಗಳಿಗೆ ಸಂವಿಧಾನ ಅಥವಾ ಕಾನೂನಿನ ನಿರ್ಬಂಧವಿಲ್ಲ. ಆದರೆ, 1951ರ ಜನತಾ ಪ್ರಾತಿನಿಧ್ಯ ಕಾಯಿದೆಯ ಸೆಕ್ಷನ್ 29ಸಿ ಅಡಿಯಲ್ಲಿ ದೇಣಿಗೆಯನ್ನು ಘೋಷಿಸುವುದು ಕಡ್ಡಾಯ. 20 ಸಾವಿರಕ್ಕಿಂತ ಹೆಚ್ಚಿನ ದೇಣಿಗೆಗೆ ಮಾತ್ರ ಇದು ಅನ್ವಯವಾಗುತ್ತದೆ.

2 ಸಾವಿರ ರೂಪಾಯಿ ಮತ್ತು ಅದಕ್ಕೆ ತತ್ಸಮಾನವಾದ ದೇಣಿಗೆಯನ್ನು ನಿಷೇಧಿಸುವಂತೆ ಚುನಾವಣಾ ಆಯೋಗವು ಕೇಂದ್ರ ಸರಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ತಿಳಿಸಿದೆ. ಕಪ್ಪುಹಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇಂದ್ರ ಸರಕಾರವು ಗರಿಷ್ಠ ನೋಟುಗಳನ್ನು ನಿಷೇಧಿಸಿದ್ದರಿಂದ ದೇಶದ ಕೋಟಿಗಟ್ಟಲೆ ಜನ ಬಹಳಷ್ಟು ಕಷ್ಟಪಟ್ಟಿರಬೇಕಾದರೆ, ರಾಜಕೀಯ ಪಕ್ಷಗಳೂ ಕೂಡ ಕಪ್ಪುಹಣದ ವಿರುದ್ಧ ಹೋರಾಡಬೇಕೆಂದು ಚುನಾವಣಾ ಆಯೋಗ ಅಭಿಪ್ರಾಯಪಟ್ಟಿದೆ. ಆಯೋಗ ಸಲ್ಲಿಸಿರುವ ಪ್ರಸ್ತಾವನೆ ಕಾನೂನು ಆಯೋಗದ ಕೈಸೇರಿದೆ.

Leave a Reply

comments

Related Articles

error: