ಮೈಸೂರು

ವಿಶ್ವ ದಾಖಲೆ ನಿರ್ಮಿಸಿದ ಡಾ.ಬಿ.ಮನು ಮೆನನ್ ಗೆ ಸನ್ಮಾನ

ವಿಶ್ವ ದಾಖಲೆ ನಿರ್ಮಿಸಿದ ಡಾ.ಬಿ.ಮನು ಮೆನನ್ ಗೆ ಸನ್ಮಾನ

ಮೈಸೂರು,ಆ.2-`ಮರ್ಮ ಚಿಕಿತ್ಸೆ’ ಮೂಲಕ ಗಿನ್ನಿಸ್ ದಾಖಲೆ ನಿರ್ಮಿಸಿರುವ ಡಾ.ಬಿ.ಮನು ಮೆನನ್ ಅವರನ್ನು ಪ್ರಜ್ಞಾವಂತ ಮೈಸೂರು ನಾಗರೀಕ ವೇದಿಕೆಯವರು ಸನ್ಮಾನಿಸಿದರು.

ನಗರದ ವಿವಿ ಮೊಹಲ್ಲಾದಲ್ಲಿರುವ ಡಿಆರ್ ಎಂ ಆಸ್ಪತ್ರೆ ಆವರಣದಲ್ಲಿ ಗುರುವಾರ ನಡೆದ ಸರಳ ಸಮಾರಂಭದಲ್ಲಿ ಮನು ಮೆನನ್ ಅವರಿಗೆ ಶಾಲು ಹೊದಿಸಿ, ಪೇಟ ತೊಡಿಸಿ, ಹೂ ಗುಚ್ಛ ನೀಡಿ ಸನ್ಮಾನಿಸಲಾಯಿತು.

ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಮಾತನಾಡಿ, ಮರ್ಮ ಚಿಕಿತ್ಸೆ ಎಂಬುದು ಪುರಾತನ ವಿದ್ಯೆ. ನೈಸರ್ಗಿಕ ಗಿಡಮೂಲಿಕೆಯ ಔಷಧೀಯ ಚಿಕಿತ್ಸೆಯ ವಿಧಾನವಾಗಿದ್ದು, ಇದರಿಂದ ಬೇಗ ಗುಣಮುಖವಾಗಬಹುದು. ಇದರಿಂದ ಯಾವುದೇ ಅಡ್ಡ ಪರಿಣಾಮಗಳಿರುವುದಿಲ್ಲ ಎಂದರು.

ಮನು ಮೆನನ್ ಅವರು ಮರ್ಮ ಚಿಕಿತ್ಸೆಯ ಮೂಲಕ ಬದುಕುಳಿದವರು. ನಂತರ ಆ ಚಿಕಿತ್ಸೆಯನ್ನು ಕಲಿತು ಇದೀಗ ಅನೇಕರ ಜೀವ ಉಳಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಮರ್ಮ ಚಿಕಿತ್ಸೆ ನೀಡಿದ ಗುರುವಿನಿಂದಲೇ ಚಿಕಿತ್ಸೆ ಕಲಿತು ಹೆಚ್ಚಿನ ಚಿಕಿತ್ಸೆಗಾಗಿ ಹಿಮಾಲಯಕ್ಕೆ ತೆರಳಿ ಅಲ್ಲಿ ಯೋಗಿಗಳು, ಅಘೋರಿಗಳು ಮತ್ತು ಋಷಿಗಳಿಂದ ಹಲವು ವರ್ಷಗಳ ಕಾಲ ಮರ್ಮ ಚಿಕಿತ್ಸೆಯ ಪಾಂಡಿತ್ಯ ಪಡೆದು ಇದೀಗ ಬನ್ನೂರು ಮುಖ್ಯ ರಸ್ತೆ ವಾಜಮಂಗಲ ಅಂಚೆ, ಹಲಗಯ್ಯನ ಹುಂಡಿಯಲ್ಲಿ ಆಯುರ್ ಮಲಂ ಚಿಕಿತ್ಸಾ ಕೇಂದ್ರ ತೆರೆದು ಸಾವಿರಾರು ಮಂದಿಗೆ ಮರ್ಮ ಚಿಕಿತ್ಸೆ ನೀಡುತ್ತಿದ್ದಾರೆ.

ಮರ್ಮ ಚಿಕಿತ್ಸೆಯನ್ನು ಕೀಲು ನೋವು, ಕಾಲು ಉರಿ, ಬೆನ್ನು ನೋವು, ಸ್ನಾಯು ಮತ್ತು ಸಂಧಿ ನೋವು, ನರ ಒತ್ತುವಿಕೆ, ಮೂಳೆ ನೋವು, ಮೂಳೆ ಜರುಗುವಿಕೆ, ಮಂಡಿ ನೋವಿನ ಸಮಸ್ಯೆ, ಸಂಧಿ ಬಿಗಿತ, ಸ್ನಾಯು ಸೆಳೆತ, ಉಸಿರಾಟದ ತೊಂದರೆ, ಪಚನ ಕ್ರಿಯೆ ಸಮಸ್ಯೆ, ನರ ದೌರ್ಬಲ್ಯ, ಮಾನಸಿಕ ಸಮಸ್ಯೆ, ವೆರಿಕೋಸ್ ಸಮಸ್ಯೆ, ದೇಹ ಮರಗಟ್ಟುವಿಕೆ, ಲಕ್ವ ಸೇರಿದಂತೆ ಅನೇಕ ರೋಗಗಳಿಗೆ ನೀಡಬಹುದಾಗಿದೆ.

ಸನ್ಮಾನ ಸಮಾರಂಭದಲ್ಲಿ ಸಮಾಜ ಸೇವಕ ಡಾ.ಕೆ.ರಘುರಾಂ ವಾಜಪೇಯಿ, ಪ್ರಜ್ಞಾವಂತ ನಾಗರಿಕ ವೇದಿಕೆಯ ಅಧ್ಯಕ್ಷ ಕಡಕೊಳ ಜಗದೀಶ್, ತೇಜಸ್, ಗಿರೀಶ್, ವಿಕ್ರಂ ಅಯ್ಯಂಗಾರ್, ರಾಜಗೋಪಾಲ್, ಪ್ರದೀಪ್, ಮಧು ಇತರರು ಉಪಸ್ಥಿತರಿದ್ದರು. (ಎಚ್.ಎನ್, ಕೆ.ಎಸ್, ಎಂ.ಎನ್)

Leave a Reply

comments

Related Articles

error: