ಲೈಫ್ & ಸ್ಟೈಲ್

ತೂಕ ಕಡಿಮೆಯಾಗಬೇಕೇ ? ಈ ಸಲಹೆ ಅನುಸರಿಸಿ

ಕೆಲವರಿಗೆ ತಾವು ಬಳುಕುವ ಲತೆಯಂತೆ ಕಾಣಬೇಕು. ಎಷ್ಟೇ ಜನಜಂಗುಳಿಯ ನಡುವೆ ನಿಂತಿದ್ದರೂ ನಮ್ಮನ್ನೇ ದಿಟ್ಟಿಸಿ ನೋಡಬೇಕು ಅಂತಹ ಸುಂದರ ಮೈಮಾಟವನ್ನು ನಾವು ಹೊಂದಬೇಕು ಎನ್ನುವ ಆಶಯಗಳಿರುವುದು ಸಹಜ. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಫಾಸ್ಟ್ ಫುಡ್, ಬದಲಾದ ಜೀವನ ಶೈಲಿ, ಒತ್ತಡಗಳಿಂದ ಶರೀರದ ತೂಕ ಬೇಗ ಹೆಚ್ಚುತ್ತಿದೆ. ತೂಕವನ್ನು ಕಡಿಮೆ ಮಾಡಿಕೊಳ್ಳಲು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಜ್ಯೂಸ್ ಗಳನ್ನು ಆಗಾಗ ಸೇವಿಸುತ್ತಿರಿ.

kottambari-juice-webಕೊತ್ತಂಬರಿ ಸೊಪ್ಪು : ಸ್ವಲ್ಪ ಕುದಿಸಿದ ನೀರಿನಲ್ಲಿ ನುಣ್ಣಗೆ ರುಬ್ಬಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಅದರಲ್ಲಿ 4ರಿಂದ 5ಹನಿ ಲಿಂಬುರಸವನ್ನು ಬೆರೆಸಿ ಕುಡಿಯಿರಿ. ಇದು ರಕ್ತವನ್ನು ಶುದ್ಧೀಕರಿಸುವುದಲ್ಲದೇ, ಪಚನಕ್ರಿಯೆಯನ್ನು ಸರಾಗವಾಗಿಸುತ್ತದೆ. ಕುದಿಸಿದ ನೀರಿನಲ್ಲಿ ಲಿಂಬುರಸ ಬೆರೆಸಿ ಕುಡಿಯುವುದರಿಂದ ಹೊಟ್ಟೆ ಉರಿಯು ಶಮನಗೊಳ್ಳುತ್ತದೆ.

honey-webಜೇನುತುಪ್ಪ : ಒಂದು ಗ್ಲಾಸ್ ಕುದಿಸಿದ ನೀರಿಗೆ ಒಂದು ಲಿಂಬುಹಣ್ಣಿನ ರಸ ಹಾಗೂ ಒಂದು ಚಮಚ ಜೇನುತುಪ್ಪವನ್ನು ಬೆರೆಸಿ ಸೇವಿಸಿ. ಇದು ರಕ್ತವನ್ನು ಶುದ್ಧೀಕರಿಸುವುದಲ್ಲದೇ ಶಕ್ತಿಯನ್ನು ನೀಡುತ್ತದೆ.

hagalakayi-webಹಾಗಲಕಾಯಿ : ಕುದಿಸಿದ ನೀರಿನಲ್ಲಿ ಅರ್ಧ ಕಪ್ ಹಾಗಲಕಾಯಿ ಬೆರೆಸಿ ಜ್ಯೂಸ್ ತಯಾರಿಸಿ ಅದರಲ್ಲಿ ಒಂದು ಲಿಂಬುಹಣ್ಣಿನ ರಸವನ್ನು ಬೆರೆಸಿ ಕುಡಿಯಿರಿ.

sompu-webಸೋಂಪು ; ಕುದಿಸಿದ ನೀರಿನಲ್ಲಿ ಸೋಂಪು ಅಥವಾ ಒಂದು ಚಮಚ ಕೊತ್ತಂಬರಿ ಪುಡಿಯನ್ನು ಬೆರೆಸಿ ಕುಡಿಯಿರಿ. ಸೋಂಪು ತೂಕ ಹೆಚ್ಚುವುದನ್ನು ತಡೆಯುತ್ತದೆ.

green-tea-webಗ್ರೀನ್ ಟೀ : ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ಸ್ ಗಳು ಚಯಾಪಚಯ ಕ್ರಿಯೆಯನ್ನು ಸುಗಮಗೊಳಿಸಿ ಹೊಟ್ಟೆಯಲ್ಲಿನ ಬೊಜ್ಜನ್ನು ಕರಗಿಸಲು ನೆರವಾಗುತ್ತವೆ.

pineapple-juice-webಅನಾನಸು : ಇದರಲ್ಲಿರುವ ವಿಟಾಮಿನ್ ಸಿ ಶರೀರಕ್ಕೆ ಹೆಚ್ಚಿನ ಶಕ್ತಿಯನ್ನು ನೀಡಲಿದೆ. ಬೊಜ್ಜನ್ನು ಕರಗಿಸುವ ಶಕ್ತಿ ಇದರಲ್ಲಿದೆ. ಅನಾನಸು ಹಾಗು ಸ್ವಲ್ಪ ಶುಂಠಿ ಬೆರೆಸಿ ಮಾಡಿದ ಜ್ಯೂಸ್ ಕುಡಿಯುವುದರಿಂದ ದೇಹದಲ್ಲಿನ ಕೊಬ್ಬಿನಂಶ ಕರಗಲಿದೆ.

ajavaan-webಓಮ : ಒಂದು ಗ್ಲಾಸ್ ನೀರಿನಲ್ಲಿ ಅರ್ಧ ಚಮಚ ಹಾಕಿ ಕುದಿಸಿ ಸೇವಿಸುವುದರಿಂದ ಪಚನಕ್ರಿಯೆಯನ್ನು ಹೆಚ್ಚಿಸಿ, ದೇಹದ ತೂಕ ಕಡಿಮೆಯಾಗಲು ಸಹಕಾರಿಯಾಗಿದೆ.

alovera-webಅಲೊವೆರಾ : ಇದರ ಜ್ಯೂಸ್ ಸೇವಿಸುವುದರಿಂದ ಶರೀರದಲ್ಲಿ ಬೊಜ್ಜಿನಂಶ ಶೇಖರಗೊಳ್ಳುವುದು ಕಡಿಮೆಯಾಗಲಿದೆ. ಅಷ್ಟೇ ಅಲ್ಲದೇ ಹೊಟ್ಟೆಯಲ್ಲಿನ ಬೊಜ್ಜು ಕರಗಿ ಸಮಸ್ಥಿತಿಗೆ ಬರಲಿದೆ.

 

 

Leave a Reply

comments

Related Articles

error: