ದೇಶ

ನಕಲಿ ಇಂಜಿನಿಯರಿಂಗ್ ಕಾಲೇಜು ಹಾವಳಿ: ರಾಜಧಾನಿ ದಿಲ್ಲಿಗೆ ಮೊದಲ ಸ್ಥಾನ

ನವದೆಹಲಿ,ಆ.2-ಭಾರತ ದೇಶದಲ್ಲಿ ಸುಮಾರು 277 ನಕಲಿ ಇಂಜಿನಿಯರಿಂಗ್ ಕಾಲೇಜುಗಳಿದ್ದು, ನಕಲಿ ಇಂಜಿನಿಯರಿಂಗ್ ಕಾಲೇಜು ಹಾವಳಿಯಲ್ಲಿ ದೆಹಲಿ ಮೊದಲ ಸ್ಥಾನದಲ್ಲಿದೆ.

ದಿಲ್ಲಿ 66, ತೆಲಂಗಾಣ 35, ಪಶ್ಚಿಮ ಬಂಗಾಳದಲ್ಲಿ 27, ಕರ್ನಾಟಕದಲ್ಲಿ 23, ಉತ್ತರ ಪ್ರದೇಶ 22, ಹರಿಯಾಣ 18, ಮಹಾರಾಷ್ಟ್ರ 16 ಹಾಗೂ ತಮಿಳುನಾಡಿನಲ್ಲಿ 11 ನಕಲಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳಿವೆ.

ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆಯ ರಾಜ್ಯ ಸಚಿವ ಸತ್ಯಪಾಲ್ ಸಿಂಗ್ ಬಹಿರಂಗಪಡಿಸಿರುವ ದಾಖಲೆಯಲ್ಲಿ ವಿಚಾರ ಬಯಲಾಗಿದೆ.

ನಕಲಿ ಸಂಸ್ಥೆಗಳು ಇಂಜಿನಿಯರಿಂಗ್ ಹಾಗೂ ತಾಂತ್ರಿಕ ಶಿಕ್ಷಣ ಕೋರ್ಸ್ಗಳನ್ನು ನೀಡುತ್ತಿವೆ ಎಂಬ ಆಘಾತಕಾರಿ ವಿಚಾರ ಬಯಲಾಗಿದೆ.

ತಾಂತ್ರಿಕ ಶಿಕ್ಷಣಕ್ಕಾಗಿ ಅಖಿಲ ಭಾರತ ಪರಿಷತ್(ಎಐಸಿಟಿಇ)ಅನುಮೋದನೆ ಪಡೆಯದೇ ಇಂಜಿನಿಯರಿಂಗ್ ಕೋರ್ಸ್ಗಳನ್ನು ನೀಡುತ್ತಿರುವ ನಿದರ್ಶನಗಳು ಸರಕಾರದ ಗಮನಕ್ಕೆ ಬಂದಿದೆ ಎಂದು ಲೋಕಸಭೆಯಲ್ಲಿ ಲಿಖಿತ ಪ್ರತಿಕ್ರಿಯೆಯೊಂದರಲ್ಲಿ ಸಿಂಗ್ ತಿಳಿಸಿದ್ದಾರೆ. ಸಂಸ್ಥೆಗಳು ಎಐಸಿಟಿಇಗಳಿಂದ ಅಗತ್ಯವಿರುವ ಅನುಮತಿಯನ್ನು ಪಡೆಯಬೇಕು. ಇಲ್ಲವಾದರೆ ಅಂತಹ ಸಂಸ್ಥೆಗಳನ್ನು ಮುಚ್ಚಲಾಗುತ್ತದೆ ಎಂದು ಸೂಚನೆ ನೀಡಲಾಗಿದೆ. (ಎಂ.ಎನ್)

Leave a Reply

comments

Related Articles

error: