ಕರ್ನಾಟಕ

ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಹೆಚ್. ವಿಶ್ವನಾಥ್ ನೇಮಕ?

ಬೆಂಗಳೂರು (ಆ.2): ಜೆಡಿಎಸ್ ಪಕ್ಷದ ನೂತನ ರಾಜ್ಯಾಧ್ಯಕ್ಷರಾಗಿ ಮಾಜಿ ಸಚಿವ ಹಾಗೂ ಮೈಸೂರು ಜಿಲ್ಲೆಯ ಹುಣಸೂರು ಕ್ಷೇತ್ರ ಶಾಸಕಗಾಗಿರುವ ಹೆಚ್.ವಿಶ್ವನಾಥ್ ಅವರನ್ನು ನೇಮಿಸಲಾಗಿದ ಎಂದು ತಿಳಿದುಬಂದಿದೆ.

ಜೆಡಿಎಸ್ ಅಧಿನಾಯಕ ಹಾಗೂ ಮಾಜಿ ಪ್ರಧಾನಿ ದೇವೇಗೌಡರು ಪಕ್ಷದ ನೂತನ ರಾಜ್ಯಾಧ್ಯಕ್ಷರಾಗಿ ಹೆಚ್.ವಿಶ್ವನಾಥ ರವನರನ್ನು ನೇಮಿಸಿದ್ದಾರೆ  ಎನ್ನಲಾಗಿದೆ. ದೇವೇಗೌಡರು ಖುದ್ದು ವಿಶ್ವನಾಥ್ ಅವರಿಗೆ ದೂರವಾಣಿ ಕರೆ ಮಾಡಿ ಈ ವಿಷಯ ತಿಳಿಸಿದ್ದು, ವಿಶ್ವನಾಥ್ ಅವರು ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದೂ ತಿಳಿದುಬಂದಿದೆ.

ರಾಜ್ಯಾಧ್ಯಕ್ಷರಾಗಿರುವ ಕುಮಾರಸ್ವಾಮಿಯವರು ಈಗ ಮುಖ್ಯಮಂತ್ರಿಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಜೆಡಿಎಸ್ ಜವಾಬ್ದಾರಿಯನ್ನು ಹೆಚ್.ವಿಶ್ವನಾಥ್ ಅವರಿಗೆ ನೀಡಲು ದೇವೇಗೌಡರು ನಿರ್ಧಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಪಕ್ಷದ ವತಿಯಿಂದ ಇನ್ನೂ ಅಧಿಕೃತ ಆದೇಶ ಹೊರಬಿದ್ದಿಲ್ಲ.

ಆದರೆ ಮೊದಲು ರಾಜ್ಯಾಧ್ಯಕ್ಷ ಸ್ಥಾನ ವಹಿಸಿಕೊಳ್ಳಲು ಹಿಂಜರಿಕೆ ತೋರಿದ್ದ ವಿಶ್ವನಾಥ್ ಅವರು ಇದೀಗ ರಾಜ್ಯಾಧ್ಯಕ್ಷ ಹುದ್ದೆ ವಹಿಸಿಕೊಳ್ಳಲು ಧೈರ್ಯ ಮಾಡಿದ್ದಾರೆ. ಇದೇ ವೇಳೆ ರಾಜ್ಯಾಧ್ಯಕ್ಷರಾಗಲು ವಿಶ್ವನಾಥ್ ಅವರು ಜೆಡಿಎಸ್ ವರಿಷ್ಠ ದೇವೆಗೌಡರಿಗೆ ಕೆಲವು ಷರತ್ತುಗಳನ್ನು ವಿಧಿಸಿದ್ದಾರೆ ಎಂದೂ ಕೆಲವು ಖಾಸಗಿ ಟಿ.ವಿ ವಾಹಿನಿಗಳು ವರದಿ ಮಾಡಿವೆ. (ಎನ್.ಬಿ)

Leave a Reply

comments

Related Articles

error: