ವಿದೇಶ

ಓರ್ವ ಭಾರತೀಯ ಸೇರಿ ಮೂವರನ್ನು ಅಪಹರಿಸಿ ಹತ್ಯೆಗೈದ ಉಗ್ರಗಾಮಿಗಳು

ಕಾಬೂಲ್,ಆ.2-ಓರ್ವ ಭಾರತೀಯ ಸೇರಿದಂತೆ ಮೂವರು ವಿದೇಶಿ ಪ್ರಜೆಗಳನ್ನು ಅಪಹರಿಸಿದ ಉಗ್ರಗಾಮಿಗಳು ಅವರನ್ನು ಹತ್ಯೆಗೈದಿರುವ ಘಟನೆ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನಲ್ಲಿ ನಡೆದಿದೆ.

ಕಾಬೂಲ್ ನಲ್ಲಿರುವ ಅಂತಾರಾಷ್ಟ್ರೀಯ ಆಹಾರ ಕಂಪನಿಯೊಂದರಲ್ಲಿ ಇವರು ಕೆಲಸ ಮಾಡುತ್ತಿದ್ದರು. ಮೂವರು ವಿದೇಶಿ ಪ್ರಜೆಗಳು ವಿಶ್ವದ ಎರಡನೇ ಅತ್ಯಂತ ದೊಡ್ಡ ಆಹಾರ ಹಾಗೂ ಅಡುಗೆ ಸೇವಾ ಕಂಪೆನಿ ಸೊಡೆಕ್ಸ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಕಾಬೂಲ್ ಹಿರಿಯ ರಾಯಭಾರಿಯೊಬ್ಬರು ತಿಳಿಸಿದ್ದಾರೆ.

ಭಾರತ, ಮಲೇಷ್ಯಾ ಹಾಗೂ ಮಸಿಡೋನಿಯ ದೇಶದ ಪ್ರಜೆಯನ್ನು ಉಗ್ರರು ಅಪಹರಿಸಿ, ಹತ್ಯೆಗೈದಿದ್ದಾರೆ. ನಾವು ಅವರ ಮೃತದೇಹವನ್ನು ಪತ್ತೆ ಹಚ್ಚಿದ್ದೇವೆ. ಮೃತದೇಹಗಳ ಪಕ್ಕದಲ್ಲಿ ಗುರುತುಪತ್ರ ಲಭಿಸಿದೆ ಎಂದು ಅಫ್ಘಾನಿಸ್ತಾನದ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ. (ಎಂ.ಎನ್)

Leave a Reply

comments

Related Articles

error: