ಮೈಸೂರು

ಬಸ್ಸಿನಿಂದ ಕೆಳಗಿಳಿಸುವ ನೆಪದಲ್ಲಿ ಸರ ಕಿತ್ತು ಪರಾರಿ

ಮೈಸೂರು,ಆ.3:-  ಮಹಿಳೆಯೋರ್ವರನ್ನು ಬಸ್ಸಿನಿಂದ ಕೆಳಗಿಳಿಸುವ ನೆಪದಲ್ಲಿ ಇಬ್ಬರು ಅಪರಿಚಿತ ಮಹಿಳೆಯರು ಆಕೆಯ  ಕತ್ತಿನಲ್ಲಿದ್ದ ಚಿನ್ನದ ಸರವನ್ನು ಎಗರಿಸಿದ ಘಟನೆ ಸಿಟಿ ಬಸ್ ನಿಲ್ದಾನದಲ್ಲಿ ನಡೆದಿದೆ.

ಜಯಮ್ಮ ಎಂಬವರು  ತಮ್ಮ ಮಗಳೊಂದಿಗೆ ಆ.1ರಂದು ಸಂಜೆ 7.45 ಕ್ಕೆ ಚಾಮರಾಜ ನಗರದಿಂದ ಮೈಸೂರಿಗೆ ರೈಲಿನಲ್ಲಿ ಬಂದು ಮನೆಗೆ ಹೋಗುವ ಸಲುವಾಗಿ ರೈಲ್ವೇ ನಿಲ್ದಾಣದಿಂದ ಸಿಟಿ ಬಸ್ಸೊಂದರಲ್ಲಿ ನಗರ ಬಸ್ ನಿಲ್ದಾಣಕ್ಕೆ ಬಂದಿದ್ದಾರೆ. ಬಸ್ ಇಳಿಯುವ ಸಮಯದಲ್ಲಿ ಇವರೊಂದಿಗೆ ಪ್ರಯಾಣಿಸುತ್ತಿದ್ದ ಅಪರಿಚಿತ ಹೆಂಗಸರು ಜಯಮ್ಮ ಅವರ ಕೈಯನ್ನು ಹಿಡಿದುಕೊಂಡು ಕೆಳಕ್ಕೆ ಇಳಿಸುವ ಸಮಯದಲ್ಲಿ ಜಯಮ್ಮ ಧರಿಸಿದ್ದ 22 ಗ್ರಾಂ ತೂಕದ ಸುಮಾರು 48.000ರೂ. ಬೆಲೆ ಬಾಳುವ ಚಿನ್ನದ ಸರವನ್ನು ಅಪಹರಿಸಿದ್ದಾರೆ. ಜಯಮ್ಮ ಬಸ್ಸಿನಿಂದ ಕೆಳಕ್ಕೆ ಇಳಿದ ನಂತರ ನೋಡಿಕೊಂಡು ಕೂಗಿಕೊಳ್ಳುವಷ್ಟರಲ್ಲಿ ಅಪರಿಚಿತ ಹೆಂಗಸರು ಅಲ್ಲಿಂದ ಪರಾರಿಯಾಗಿದ್ದರು ಎನ್ನಲಾಗಿದೆ. ಈ ಕುರಿತು ದೇವರಾಜ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: