ಕರ್ನಾಟಕ

ವಿದ್ಯಾರ್ಥಿಗಳಿಗೆ 13 ಲಕ್ಷ ರೂ ಶಾಲಾ ಶುಲ್ಕ ವಿತರಣೆ

ರಾಜ್ಯ(ಮಂಡ್ಯ) ಆ.3:- ಎಂ.ಕೆ ಆಗ್ರೋಟೆಕ್ ಪ್ರೈ.ಲಿ. ವತಿಯಿಂದ ವಿದ್ಯಾರ್ಥಿಗಳಿಗೆ 13 ಲಕ್ಷ ರೂ ಶಾಲಾ ಶುಲ್ಕ ವಿತರಣೆ ಮಾಡಲಾಯಿತು.

ಶ್ರೀರಂಗಪಟ್ಟಣದ ಖಾಸಗಿ ಕಂಪನಿಯಾದ ಎಂ.ಕೆ ಆಗ್ರೋಟೆಕ್ ಪ್ರೈ.ಲಿ.ಕಂಪನಿಯು ತನ್ನ ವಾರ್ಷಿಕ ಆದಾಯದ ಶೇ 2 ರ ಅನುದಾನದಲ್ಲಿ ತಾಲೂಕಿನ ವಿವಿಧ ಶಾಲೆಗಳ 106 ವಿದ್ಯಾರ್ಥಿಗಳಿಗೆ 13 ಲಕ್ಷ ರೂ.ಗಳನ್ನು ವಿತರಿಸಿತು. ಸಾಮಾಜಿಕ ಹಾಗೂ ಶೈಕ್ಷಣಿಕ ಕಾಳಜಿಯುಳ್ಳ ಈ ಕಂಪನಿಯು ಪ್ರತೀ ವರ್ಷವೂ ಈ ರೀತಿಯ ಕಾರ್ಯವನ್ನು ಕೈಗೊಳ್ಳುತ್ತಾ ಬಂದಿರುವುದು ವಿಶೇಷ. ಕಾರ್ಯಕ್ರಮದಲ್ಲಿ ಕಂಪನಿಯ ನಿರ್ದೇಶಕರಾದ ಇಮ್ರಾನ್ ಖಾನ್, ಮನನ್ ಖಾನ್ ಹಾಗೂ ಪ್ರೊ.ನಬಿಜಾನ್ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: