Uncategorized

ಯಗಚಿ ಯೋಜನೆ : ನಿರಾಶ್ರಿತರ ಪೈಕಿ ಅರ್ಹರಿಗೆ ಭೂಮಿ ನೀಡಲು ಸಲಹೆ

ಹಾಸನ (ಆ.2): ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ನಡೆಯಿತು. ಶಾಸಕರಾದ ಹೆಚ್. ಕೆ ಕುಮಾರಸ್ವಾಮಿಯವರು ಹಾಗೂ ಕೆ. ಎಸ್. ಲಿಂಗೇಶ್ ಅವರ ಉಪಸ್ಥಿತಿಯಲ್ಲಿ ನಡೆದ ಈ ಸಭೆಯಲ್ಲಿ ಜಿಲ್ಲೆಯಲ್ಲಿರುವ ಅನುಸೂಚಿತ ಜಾತಿ ಅನುಸೂಚಿತ ಪಂಗಡಗಳ ಹಲವು ಸಮಸ್ಯೆಗಳ ಕುರಿತು ಚರ್ಚೆ ನಡೆಸಲಾಯಿತು.

ಹೇಮಾವತಿ ಯಗಚಿ ವಾಟೆವಳೆ ಜಲಾಶೆ ಯೋಜನೆಗಳ ನಿರಾಶ್ರಿತರ ಸಮಸ್ಯೆಗಳು, ಪುನರ್‍ವಸತಿಗೆ ಮೀಸಲಿರಿಸಿರುವ ಜಾಗದಲ್ಲಿ ಹಲವು ದಶಕಗಳಿಂದ ಮನೆ ನಿರ್ಮಿಸಿಕೊಂಡಿರುವ ದಲಿತ ಬಡ ಕುಟುಂಬಗಳಿಗೆ ಹಕ್ಕು ಪತ್ರ ನೀಡುವ ಕುರಿತು ಪ್ರಸ್ತಾಪಿಸಲಾಯಿತು.

ಶಾಸಕರಾದ ಹೆಚ್. ಕೆ ಕುಮಾರಸ್ವಾಮಿಯವರು ಹಾಗೂ ಕೆ. ಎಸ್. ಲಿಂಗೇಶ್ ಅವರು ಮಾತನಾಡಿ ಹೆಚ್.ಆರ್.ಪಿ ಯೋಜನೆ ಜಾರಿಗೆ ಬಂದು ದಶಕಗಳೇ ಕಳೆದರು ಈಗ ಮುಳುಗಡೆ ದಾಖಾಲಾತಿಗೆ, ಜಮೀನಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಈ ಬಗ್ಗೆ ಸೂಕ್ಷ್ಮವಾಗಿ ಪರಿಶೀಲಿಸಿ ಅರ್ಹರಿಗೆ ನಿಜವಾಗಿಯೂ ತೊಂದರೆಯಲ್ಲಿರುವವರಿಗೆ ಭೂಮಿ ನೀಡಬೇಕು ಎಂದರು.

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರು ಮಾತನಾಡಿ ದಾಖಾಲಾತಿಗಳು ದುರ್ಬಳಕೆಯಾಗುತ್ತಿರುವುದು ತಮ್ಮ ಗಮನಕ್ಕೆ ಬಂದಿವೆ. ಇದಕ್ಕೆ ಅರ್ಜಿಸಲ್ಲಿಸಲು 3 ತಿಂಗಳ ಅಂತಿಮ ಕಾಲಾವಕಾಶ ನೀಡಿದಾಗ 3000 ಅರ್ಜಿಗಳು ಬಂದಿದೆ. ಎಲ್ಲಾವನ್ನು ಸೂಕ್ತವಾಗಿ ಪರಿಶೀಲಿಸಿ ತನಿಖೆಗೊಳಪಡಿಸಿದ ನಂತರವೇ ಮಂಜುರಾತಿಗೆ ಕ್ರಮವಹಿಸಲಾಗುವುದು ಎಂದರು.

ಸಮಾಜ ಕಲ್ಯಾಣ ಇಲಾಖೆಯಲ್ಲಿನ ವಸತಿ ನಿಲಯಗಳಲ್ಲಿ ಸುರಕ್ಷತೆ, ಮೂಲಭೂತ ಸೌಕರ್ಯ ವೃದ್ದಿ ಬಗ್ಗೆ ಶಾಸಕರು ಹಾಗೂ ಸಮಿತಿ, ಸಮಿತಿ ಸದಸ್ಯರಾದ ನಾರಾಯಣ್ ದಾಸ್, ಮರಿ ಜೋಸೆಫ್, ಸೋಮಶೇಖರ್, ವಿಜಯ್ ಕುಮಾರ್, ಮಹಂತಪ್ಪ, ಮಹಲಿಂಗಪ್ಪ, ಮಂಜೇಗೌಡ ಮತ್ತಿತರು ಪ್ರಸ್ತಾಪಿಸಿ ನಿಲಯ ಪಾಲಕರಿಗೆ ಹೆಚ್ಚಿನ ಜವಾಬ್ದಾರಿ ವಹಿಸಬೇಕೆಂದು ಒತ್ತಾಯಿಸಿದರು.

ಪ್ರವಾಸೋದ್ಯಮ ಇಲಾಖೆಯಲ್ಲಿ ಟ್ಯಾಕ್ಸಿ ಖರಿದಿಸಲು ಸರ್ಕಾರವು ಎಸ್.ಸಿ.ಪಿ/ಟಿ.ಎಸ್.ಪಿ ಯೋಜನೆಯಡಿ ಎಸ್.ಸಿ/ಎಸ್.ಟಿ ನಿರುದ್ಯೋಗಿ ಯುವಕರಿಗೆ ಸಹಾಯಧನ ನೀಡುತ್ತಿದ್ದು, ಎಲ್ಲೋ ಬೋರ್ಡ್ ಆಗಿ ನೊಂದಣಿಯಾಗುವ ವಾಹನಗಳಿಗೆ ರೂ. 10,000 ವರೆಗೆ ತೆರಿಗೆಯಲ್ಲಿ ವಿನಾಯಿತಿ ನೀಡಿ ಆಯಾ ಶೋ ರೂಂನವರು ತೆರಿಗೆ ಹಣವನ್ನು ಹಿಂಪಡೆಯುತ್ತಿದ್ದು, ಆ ಹಣವನ್ನು ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡುವಂತೆ ಮನವಿ ಮಾಡಿದರು.

ಕಾವೇರಿ ನೀರಾವರಿ ನಿಗಮದಿಂದ ಎಸ್.ಸಿ.ಪಿ/ಟಿ.ಎಸ್.ಪಿ ಯೋಜನೆಯಡಿ ಪರಿಶಿಷ್ಠ ಜಾತಿ/ ಪರಿಶಿಷ್ಠ ವರ್ಗಕ್ಕೆ ಸೇರಿದ ರೈತರುಗಳ ಜಮೀನಿನಲ್ಲಿ ಕೊಳವೆ ಬಾವಿ ಕೊರೆಯಾಲಾಗುತ್ತಿದ್ದು 2017ನೇ ಸಾಲಿನಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು ಇದುವರೆವಿಗೂ ಕೊಳವೆ ಬಾವಿಗಳನ್ನು ಕೊರೆದಿರುವುದಿಲ್ಲಾ ಎಂದು ಸಭೆ ಗಮನಕ್ಕೆ ತಂದರು.

ಸಭೆಯಲ್ಲಿ ಬಾಬುಜಗಜೀವನ್‍ರಾಮ್ ಭವನ ಹಾಗೂ ವಾಲ್ಮೀಕಿ ಭವನ ನಿಮಾರ್ಣಕ್ಕೆ ನಿವೇಶನಗಳನ್ನು ಒದಗಿಸುವ ಕುರಿತು ಮನವಿ ಮಾಡಲಾಯಿತು.

ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿಯವರು ತಳ ಸಮುದಾಯದ ಜನರ ಮಕ್ಕಳ ವಿದ್ಯಾಭ್ಯಾಸಕ್ಕೆ ಸೂಕ್ತ ಸೌಕರ್ಯ ಕಲ್ಪಿಸುವುದು ತಮ್ಮ ಮೊದಲ ಆದ್ಯತೆ ಹಾಗೂ ಮೊದಲು ಹಾಸ್ಟೆಲ್‍ಗಳಿಗೆ ನಿವೇಶನಗಳನ್ನು ಒದಗಿಸಿ ಹೆಚ್ಚಿನ ಕಲಿಕೆಗೆ ಹಾಗೂ ವಸತಿ ನಿಲಯಗಳಲ್ಲಿ ಸ್ವಚ್ಚತೆ, ಸುರಕ್ಷತೆಗೆ ಗಮನ ಅರಿಸಲಾಗುವುದು. ಜೊತೆ ಜೊತೆಗೆ ಸಮುದಾಯ ಭವನಗಳ ನಿಮಾರ್ಣಕ್ಕೆ ನಿವೇಶನ ಒದಗಿಸಲು ಕ್ರಮವಹಿಸಲಾಗುವುದು ಎಂದರು.

ಶಾಸಕರಾದ ಹೆಚ್. ಕೆ ಕುಮಾರಸ್ವಾಮಿಯವರು ಮಾತನಾಡಿ ದಲಿತರು ವಾಸಿಸುತ್ತಿರುವ ಜಮೀನುಗಳ ಅಕ್ರಮ ಸಕ್ರಮಕ್ಕೆ ಹೆಚ್ಚಿನ ಗಮನ ಹರಿಸುವಂತೆ ಹಾಗೂ ವಸತಿರಹಿತರಿಗೆ ಜಮೀನು, ನಿವೇಶನಗಳನ್ನು ಒದಗಿಸುವಂತೆ ಕೊರಿದರು. ನಮೂನೆ 50-53 ರಲ್ಲಿ ಅರ್ಜಿಗಳ ವಿಲೇವಾರಿ ಬೇಗ ಮುಗಿಸುವಂತೆ ಕೋರಿದರು.

ಅಂಗಡಿಹಳ್ಳಿ ನಿಮಾಸಿಗಳ ಸಮಸ್ಯೆ ಕುರಿತು ಸಮಿತಿ ಸದಸ್ಯರಾದ ಹೂರಾಜ ಅವರು ಪ್ರಸ್ತಾಪಿಸಿದರು ಅಲ್ಲಿನ ಜನರ ಶೌಚಾಲಯ ಹಾಗೂ ಇತರ ಸಮಸ್ಯೆಗಳ ಬಗ್ಗೆ ಸ್ಥಳ ಪರಿಶೀಲಿಸಿ ಅಗತ್ಯ ಕ್ರಮವಹಿಸುವುದಾಗಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದರು. ಪಿ.ಟಿ.ಸಿಎಲ್ ಅರ್ಜಿ ಗಳನ್ನು ಅದಪ್ಟು ಶೀಘ್ರವಾಗಿ ವಿಲೇವಾರಿ ಮಾಡುವಂತೆ ಹಾಗೂ ಪತ್ರಿ ಪ್ರಕರಣಕ್ಕೆ ಆದೇಶ ನೀಡುವಂತೆ ಶಾಸಕರು ಹಾಗೂ ಸಮಿತಿ ಸದಸ್ಯರು ಮನವಿ ಮಾಡಿದರು.

ಉಪ ವಿಭಾಗಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ, ಡಾ. ಹೆಚ್.ಎಲ್ ನಾಗರಾಜು, ಪ್ರಬೇಷನರಿ ಐ.ಎ.ಸ್ ಅಧಿಕಾರಿ ಪ್ರಿಯಾಂಕ ಎಂ ನಗರ ಸಭೆ ಆಯ್ತುರಾದ ಪರಮೇಶ್, ಸಮಾಜ ಕಲ್ಯಾಣ ಅಧಿಕಾರಿ ಶ್ರೀಧರ್ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. (ಎನ್.ಬಿ)

Leave a Reply

comments

Related Articles

error: