
ಮೈಸೂರು
ವ್ಯಾಪಾರ ಮುಗಿಸಿ ಬರುತ್ತಿದ್ದವರ ಮೇಲೆ ದಾಳಿ: 48 ಸಾವಿರ ರೂ. ಕಸಿದು ಪರಾರಿಯಾದ ದುಷ್ಕರ್ಮಿಗಳು
ಮೈಸೂರಿನ ಹೊರವಲಯದ ರಿಂಗ್ ರಸ್ತೆಯಲ್ಲಿ ವ್ಯಾಪಾರ ಮುಗಿಸಿ ಬರುತ್ತಿದ್ದ ನಾಲ್ವರ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳು ಅವರ ಬಳಿ ಇದ್ದ 48ಸಾವಿರ ರೂ. ನಗದು ಹಾಗೂ ಒಂದು ಚಿನ್ನದ ಸರವನ್ನು ಕಸಿದು ಪರಾರಿಯಾದ ಘಟನೆ ಭಾನುವಾರ ರಾತ್ರಿ ನಡೆದಿದೆ.
ಬನ್ನೂರಿನಿಂದ ಮೈಸೂರು ಕಡೆ ವ್ಯಾಪಾರ ಮುಗಿಸಿ ಬರುತ್ತಿದ್ದ ತಮಿಳುನಾಡು ಹಾಗೂ ಕೇರಳ ಮೂಲದ ಅಮೃತ್ ಸಾಗರ್ ಮತ್ತವರ ನಾಲ್ವರು ಸಂಗಡಿಗರ ಮೇಲೆ ನೋಂದಣಿ ಸಂಖ್ಯೆಯಿಲ್ಲದ ವಾಹನದಲ್ಲಿ ಬಂದ ದುಷ್ಕರ್ಮಿಗಳು ದಾಳಿ ನಡೆಸಿ ಅಮೃತ್ ಸಾಗರ್ ಅವರ ಬಳಿಯಿದ್ದ 48ಸಾವಿರ ರೂ.ನಗದು ಹಾಗೂ ಒಂದು ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಮೈಸೂರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಮೈಸೂರು ಹೊರವಲಯದಲ್ಲಿರುವ ರಿಂಗ್ ರಸ್ತೆಯಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪೊಲೀಸರು ಗಸ್ತು ತಿರುಗಬೇಕು ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.