ದೇಶ

ಬಿಎಸ್‍ಎನ್‍ಎಲ್‍ ಗ್ರಾಹಕರಿಗೆ 1 ಜಿಬಿ ಫ್ರೀ ಡೇಟಾ, ಅನಿಯಮಿತ ಕರೆ ಸೌಲಭ್ಯ

ರಿಲಯನ್ಸ್ ಜಿಯೋ ಪರಿಚಯವಾದ ಕೆಲವೇ ಕೆಲವು ತಿಂಗಳಲ್ಲಿ ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ತೀವ್ರ ಸಂಚಲನವನ್ನೇ ಮೂಡಿಸಿ, ಇತರ ಟೆಲಿಕಾಂ ಕಂಪನಿಗಳ ವಹಿವಾಟು ಇಳಿಮುಖವಾಗಲು ಕಾರಣವಾಗಿದೆ. ತಮ್ಮ ಗ್ರಾಹಕರನ್ನು ಉಳಿಸಲು ಪೇಚಾಡುತ್ತಿರುವ ಇತರ ಕಂಪನಿಗಳು ಜಿಯೋ ಪ್ಲ್ಯಾನ್‍ಗೆ ಸಮನಾದ ಪ್ಲ್ಯಾನ್‍ಗಳನ್ನು ನೀಡಲು ತಯಾರಿ ನಡೆಸುತ್ತಿವೆ.

ಜಿಯೋ ಗ್ರಾಹಕರಿಗೆ ನೀಡಿರುವ ಅನಿಯಮಿತ ಕರೆ ಸೌಲಭ್ಯವನ್ನು ಬಿಎಸ್‍ಎನ್‍ಎಲ್‍ ಕೂಡ ನೀಡಲು ಮುಂದಾಗಿದೆ. 399 ರೂ. ಕೊಟ್ಟು ರಿಚಾರ್ರ್ಜ್ ಮಾಡಿಸಿಕೊಂಡರೆ ಅನಿಯಮಿತ ಕರೆ ಮತ್ತು 1 ಜಿಬಿ ಡೇಟಾ ಉಚಿತವಾಗಿ ನೀಡಲು ಬಿಎಸ್‍ಎನ್‍ಎಲ್‍ ನಿಶ್ಚಯಿಸಿದೆ. ಬಿಎಸ್‍ಎನ್‍ಎಲ್‍ ದೇಶಾದ್ಯಂತ 4ಜಿ ಸೇವೆಯನ್ನು ನೀಡಲು ಕಾರ್ಯನಿರತವಾಗಿದ್ದು, ಪ್ರಸ್ತುತ 2ಜಿ, 3ಜಿ ಮತ್ತು 4ಜಿ ಗ್ರಾಹಕರು ರಿಚಾರ್ಜ್‍ ಮಾಡುವ ಮೂಲಕ ಸೇವೆಯನ್ನು ಪಡೆಯಬಹುದಾಗಿದೆ.

 

Leave a Reply

comments

Related Articles

error: