ಕರ್ನಾಟಕ

ಸಂಘದ ಅಭಿವೃದ್ದಿಗೆ ಅನುದಾನ ಮತ್ತು ಇತರೆ ಸಹಕಾರ ನೀಡಲು ಸಿದ್ಧ : ಜೆ.ಪ್ರೇಮಕುಮಾರಿ ಭರವಸೆ

ರಾಜ್ಯ(ಮಂಡ್ಯ) ಆ.3:- ರೈತರು ತಮ್ಮ ಗ್ರಾಮದ ಡೈರಿಗೆ ಗುಣಮಟ್ಟದ ಹಾಲು ಪೂರೈಕೆ ಮಾಡುವ ಮೂಲಕ ಸಂಘವು ಮತ್ತಷ್ಟು ಅಭಿವೃದ್ಧಿ ಹೊಂದಲು ಸಹಕಾರ ನೀಡಬೇಕು. ಸಂಘದ ಅಭಿವೃದ್ದಿಗೆ ಜಿಲ್ಲಾ ಪಂಚಾಯತ್ ವತಿಯಿಂದ ನೀಡಬಹುದಾದ ಎಲ್ಲ ರೀತಿಯ ಅನುದಾನ ಮತ್ತು ಇತರೆ ಸಹಕಾರವನ್ನು ನೀಡಲು ತಾವು ಸದಾ ಸಿದ್ಧವಿರುವುದಾಗಿ ಜಿಲ್ಲಾ ಪಂಚಾಯತ್ ಸದಸ್ಯೆ ಜೆ.ಪ್ರೇಮಕುಮಾರಿ ಭರವಸೆ ನೀಡಿದರು.

ಅವರು ಕೆ.ಆರ್.ಪೇಟೆ ತಾಲೂಕಿನ ಮಾರೇನಹಳ್ಳಿ(ಹರಿಯಾಲದಮ್ಮ ದೇವಸ್ಥಾನ) ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹರಿಯಾಲದಮ್ಮ ದೇವಸ್ಥಾನ, ಮಾರೇನಹಳ್ಳಿ, ಗಂಗನಹಳ್ಳಿ ಮತ್ತಿತರ ಗ್ರಾಮಗಳ ರೈತರ ಮತ್ತು ಹೈನುಗಾರರ ಸಹಕಾರದಿಂದ ನಡೆಯುತ್ತಿರುವ ಹಾಲು ಉತ್ಪಾದಕರ ಸಹಕಾರ ಸಂಘವು ಕಳೆದ ಸಾಲಿನಲ್ಲಿ ಸುಮಾರು 3ಲಕ್ಷ ರೂಗಳ ಆದಾಯ ಪಡೆದು ಉತ್ತಮ ಸಂಘ ಎಂಬ ಹೆಗ್ಗಳಿಕೆಯಲ್ಲಿ ಮುನ್ನಡೆಯುತ್ತಿರುವುದು ಶ್ಲಾಘನೀಯ. ಸಹಕಾರ ಸಂಘಗಳು ರೈತರ ಜೀವನಾಡಿಯಾಗಿರುವ ಕಾರಣ ಯಾರೂ ಸಹ ರಾಜಕೀಯ ಬೆರೆಸಬಾರದು. ರೈತರು ತಮ್ಮ ಗ್ರಾಮದ ಡೈರಿಗೆ ಗುಣಮಟ್ಟದ ಹಾಲು ಪೂರೈಕೆ ಮಾಡುವ ಮೂಲಕ ಸಂಘವು ಮತ್ತಷ್ಟು ಅಭಿವೃದ್ಧಿ ಹೊಂದಲು ಸಹಕಾರ ನೀಡಬೇಕು. ಸಂಘದ ಅಭಿವೃದ್ದಿಗೆ ಜಿಲ್ಲಾ ಪಂಚಾಯತ್ ವತಿಯಿಂದ ನೀಡಬಹುದಾದ ಎಲ್ಲ ರೀತಿಯ ಸಹಕಾರವನ್ನು ನೀಡಲು ತಾವು ಸದಾ ಸಿದ್ಧವಿರುವುದಾಗಿ ಭರವಸೆ ನೀಡಿದರು.

ಮನ್‍ಮುಲ್ ಮಾರ್ಗದ ವಿಸ್ತರಣಾಧಿಕಾರಿ ಎಸ್.ಡಿ.ರಮೇಶ್‍ಕುಮಾರ್, ವೈದ್ಯಾಧಿಕಾರಿ ಡಾ.ದೇವರಾಜು, ಸಂಘದ ಉಪಾಧ್ಯಕ್ಷ ಮಂಜುಳಮ್ಮಹರೀಶ್, ನಿರ್ದೇಶಕರಾದ ಭಾಗ್ಯಮ್ಮಜಯಶಂಕರ್, ಪ್ರೇಮರಾಜಪ್ಪ, ಮಂಜುಳಮಂಜೇಗೌಡ, ಜ್ಯೋತಿವೇದಮೂರ್ತಿ, ರೇಣುಕಾಈಶ್ವರಪ್ಪ, ವಸಂತನಾಗರಾಜು, ಭಾಗ್ಯಮ್ಮನಿಂಗೇಗೌಡ, ಸಂಘದ ಕಾರ್ಯದರ್ಶಿ ಗೀತಾಸೋಮಶೇಖರ್, ಹಾಲು ಪರೀಕ್ಷಕಿ ರುದ್ರಾಮಣಿಯಮ್ಮ ಇತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: