
ದೇಶ
ಅಪಘಾತ: ಮಲಯಾಳಂ ಗಾಯಕಿ ದುರ್ಮರಣ
ತಿರುವನಂತಪುರ,ಆ.3-ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮಲಯಾಳಂನ ಪ್ರಸಿದ್ಧ ಗಾಯಕಿ ಮಂಜೂಷಾ ಮೋಹನ್ ದಾಸ್ (27) ಮೃತಪಟ್ಟಿದ್ದಾರೆ.
ತನಿಪೂಜಾ ಪ್ರದೇಶದ ಎಂಸಿ ರೋಡ್ ಪ್ರದೇಶದಲ್ಲಿ ಮಂಜೂಷಾ ಹಾಗೂ ಅವರ ಗೆಳತಿ ಅಂಜನಾ ಅವರು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ವಿರುದ್ಧ ದಿಕ್ಕಿನಲ್ಲಿ ಬಂದ ಟ್ರಕ್ ದ್ವಿಚಕ್ರ ವಾಹನಕ್ಕೆ ಡಿಕ್ಕಿಹೊಡೆದಿತ್ತು. ಈ ವೇಳೆ ಗಾಯಗೊಂಡಿದ್ದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಮಂಜೂಷಾ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.
ಏಷಿಯಾನೆಟ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಐಡಿಯಾ ಸ್ಟಾರ್ ಸಿಂಗರ್ ಕಾರ್ಯಕ್ರಮದ ಮೂಲಕ ಮಂಜೂಷಾ ಪ್ರಸಿದ್ಧಿಯಾಗಿದ್ದರು. (ಎಂ.ಎನ್)