ಮೈಸೂರು

ಮೈಸೂರು ವಾರಿಯರ್ಸ್‍ ತಂಡದ ಪಾಲುದಾರರ ಘೋಷಣೆ

ಮೈಸೂರು,ಆ.3 ಮೈಸೂರು ವಾರಿಯರ್ಸ್ ತಂಡದ ಪ್ರಾಂಚೈಸ್ ಆಗಿರುವ ಎನ್.ಆರ್.ಸಮೂಹದ ಸೈಕಲ್ ಫ್ಯೂರ್ ಅಗರಬತ್ತೀಸ್ ಕೆಪಿಎಲ್ 7ನೇ ಆವೃತ್ತಿಗೆ ತಂಡದ ಪಾಲುದಾರರನ್ನು ಘೋಷಿಸಿದೆ.

ರಿಫಾರೆಸ್ಟ್ಇಂಡಿಯಾ, ಕಲಿಸು ಫೌಂಡೇಶನ್, ಉಷಾ ಕಿರಣ ಕಣ್ಣಿನ ಆಸ್ಪತ್ರೆ, ಡಾಯ್ಚ ಕ್ಲೆಫ್ಟ್ಕಿಂಡರ್ಲೈಫ್ ಸಂಸ್ಥೆಗಳು 7ನೇ ಆವೃತ್ತಿಯ ಪಾಲುದಾರರಾಗಿದ್ದಾರೆ. ಸಂಸ್ಥೆಗಳ ಮೂಲಕ ಆಯಾ ಕ್ಷೇತ್ರಗಳಲ್ಲಿ ಬದಲಾವಣೆಯನ್ನು ತರಲು ಪ್ರೇರೇಪಿಸುವುದು ಮೈಸೂರು ವಾರಿಯರ್ಸ್ ಮುಖ್ಯ ಗುರಿಯಾಗಿದೆ.

ಮೈಸೂರು ವಾರಿಯರ್ಸ್ ತಂಡದ ಪ್ರತಿ ಬೌಂಡರಿ ಹಾಗೂ ಸಿಕ್ಸರ್ ಗಳಿಗೆ ಹಾಗೂ ತಂಡ ತೆಗೆದುಕೊಳ್ಳುವ ಪ್ರತಿ ವಿಕೆಟ್ಗೆ 1000 ರೂ. ದೇಣಿಗೆಯನ್ನು ಪಾಲುದಾರರಿಗೆ ನೀಡಲಾಗುತ್ತದೆ. ಉಪಕ್ರಮದ ಮೂಲಕ ಪಡೆಯಲಾಗುವ ಹಣವನ್ನು ಸೈಕಲ್ ಪ್ಯೂರ್ ಅಗರಬತ್ತೀಸ್ ದುಪ್ಪಟ್ಟು ಮಾಡುತ್ತದೆ ಮತ್ತು ಎಲ್ಲಾ ಪಾಲುದಾರರ ನಡುವೆ ಸಮಾನವಾಗಿ ಹಂಚಲಾಗುತ್ತದೆ. ಹಣವನ್ನು ಸಂಸ್ಥೆಗಳು ಸಾಮಾಜಿಕ ಕಾರ್ಯಗಳಿಗೆ ಬಳಸಿಕೊಳ್ಳುತ್ತವೆ. ಸಮಾಜಕ್ಕೆ ಏನನ್ನಾದರೂ ಹಿಂತಿರುಗಿ ನೀಡಬೇಕು ಎನ್ನುವ ಎನ್ಆರ್ ಸಮೂಹದ ಬದ್ಧತೆ ಹಾಗೂ ಬಾಧ್ಯತೆಯನ್ನು ಸಾಕಾರಗೊಳಿಸಲು ತಂಡವು ಉಪಕ್ರಮವನ್ನು ನಡೆಸಿಕೊಂಡು ಬಂದಿದೆ.

ಮೈಸೂರು ವಾರಿಯರ್ಸ್ಇದೇ ಮೊದಲ ಬಾರಿಗೆ ರಿಫಾರೆಸ್ಟ್ಇಂಡಿಯಾ ಜೊತೆ ಕೈಜೋಡಿಸಿದೆ. ಇದರಿಂದ ಬರುವ ಹಣವನ್ನು ರಿಫಾರೆಸ್ಟ್ ಇಂಡಿಯಾ, ವಿವಿಧ ಪ್ರದೇಶಗಳಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ಕೆ ಬಳಸಿಕೊಳ್ಳಲಿದೆ. ಇನ್ನುಳಿದ ಮೂರು ಪಾಲುದಾರರು ಕಳೆದೆರಡು ವರ್ಷಗಳಿಂದಲೂ ಮೈಸೂರು ವಾರಿಯರ್ಸ್ ತಂಡದ ಉದ್ದೇಶಿತ ಪಾಲುದಾರರಾಗಿದ್ದು, ವರ್ಷವೂ ಮುಂದುವರೆಯಲಿದ್ದಾರೆ.

ಕಲಿಸು ಫೌಂಡೇಶನ್ಜತೆಗೂಡಿ, ಮೈಸೂರು ವಾರಿಯರ್ಸ್ಕುವೆಂಪುನಗರ ಸರ್ಕಾರಿ ಶಾಲೆಗಳಲ್ಲಿ 5 ಜ್ಞಾನಲಯಗಳನ್ನು (ಗ್ರಂಥಾಲಯ) ನಿರ್ಮಿಸಿದೆ. ಇವುಗಳಲ್ಲಿ, `ವೆಸ್ಟೊ ಪ್ರೊ ಸೈನ್ಸ್ ಲ್ಯಾಬ್ಮೈಸೂರಿನ ಮೊದಲ ಸಮಗ್ರ ವಿಜ್ಞಾನ ಪ್ರಯೋಗಾಲಯವಾಗಿ ಗುರುತಿಸಿಕೊಂಡಿದೆ. ಉಷಾ ಕಿರಣ ಕಣ್ಣಿನ ಆಸ್ಪತ್ರೆಯು ಮೆಳ್ಳಗಣ್ಣಿನಂತಹ ಜನ್ಮ ವಿಕಲಾಂಗ ಸಮಸ್ಯೆ ಇರುವ 30 ಜನ ಹೆಣ್ಣುಮಕ್ಕಳಿಗೆ ಚಿಕಿತ್ಸೆ ನೀಡಿದೆ. ಹಾಗೆಯೇ ಡಾಯ್ಚ ಕ್ಲೆಫ್ಟ್ಕಿಂಡರ್ಲೈಫ್ ಸಂಸ್ಥೆಯು ಹಣವನ್ನು ಬಳಸಿಕೊಂಡು 30 ಜನ ಹೆಣ್ಣು ಮಕ್ಕಳಿಗೆ ಸೀಳು ತುಟಿ ಶಸ್ತ್ರಚಿಕಿತ್ಸೆಯನ್ನು ಮಾಡಿದೆ.

ಮೈಸೂರು ವಾರಿಯರ್ಸ್ ಮಾಲೀಕ ಮತ್ತು ಸೈಕಲ್ ಪ್ಯೂರ್ ಅಗರಬತ್ತೀಸ್ ವ್ಯವಸ್ಥಾಪಕ ನಿರ್ದೇಶಕ ಅರ್ಜುನ್ರಂಗ ಮಾತನಾಡಿ, ರಿಫಾರೆಸ್ಟ್ಇಂಡಿಯಾ, ಕಲಿಸು ಫೌಂಡೇಶನ್, ಉಷಾ ಕಿರಣ ಕಣ್ಣಿನ ಆಸ್ಪತ್ರೆ ಮತ್ತು ಡಾಯ್ಚ ಕ್ಲೆಫ್ಟ್ಕಿಂಡರ್ಲೈಫ್ ಸಂಸ್ಥೆಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮಾಡಿರುವ ಅದ್ಭುತ ಕೆಲಸಗಳಿಗಾಗಿ ಈಗಾಗಲೇ ಗುರುತಿಸಿಕೊಂಡಿವೆ. ಇಂತಹ ಸಾಮಾಜಿಕ ಕಾಳಜಿಯುಳ್ಳ ಸಂಸ್ಥೆಗಳನ್ನು ನಮ್ಮ ತಂಡದ 7ನೇ ಆವೃತ್ತಿಯ ಪಾಲುದಾರರನ್ನಾಗಿ ಘೋಷಿಸಲು ನಮಗೆ ಸಂತಸವೆನಿಸುತ್ತದೆ. ಸಹಭಾಗಿತ್ವವು ಬಾರಿಯ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಲು ನಮ್ಮ ತಂಡಕ್ಕೆ ಒಂದು ರೀತಿಯ ಪ್ರೇರಣೆಯನ್ನು ನೀಡಲಿದೆ ಎನ್ನುವ ವಿಶ್ವಾಸ ನಮಗಿದೆ ಎಂದರು.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ನಡೆಸುವ 7ನೇ ಆವೃತ್ತಿಯ ಕೆಪಿಎಲ್ ಪಂದ್ಯಾವಳಿಗಳು .15 ರಿಂದ ಪ್ರಾರಂಭವಾಗಲಿದೆ. (ಎಂ.ಎನ್)

Leave a Reply

comments

Related Articles

error: