
ಮೈಸೂರು
ಕ್ರೈಸ್ತರ ಪ್ರಗತಿಪರ ಸಂಸ್ಥೆಯಿಂದ 2017 ಕ್ಯಾಲೆಂಡರ್ ಬಿಡುಗಡೆ
ಕ್ರೈಸ್ತರ ಪ್ರಗತಿಪರ ಸಂಸ್ಥೆಯು ಸಮುದಾಯದ ವೃದ್ಧಾಶ್ರಮ, ಶಿಕ್ಷಣ, ವೈದ್ಯಕೀಯ ಕ್ಷೇತ್ರಗಳಲ್ಲಿ ಶ್ಲಾಘನೀಯ ಸೇವೆ ಸಲ್ಲಿಸುತ್ತಿದ್ದು ನಾಡಿನ ಅಭಿವೃದ್ದಿಗೆ ಸಾಮಾಜಿಕವಾಗಿ ಶ್ರಮಿಸುತ್ತಿದೆ ಎಂದು ಅಧ್ಯಕ್ಷ ಜ್ಞಾನಪ್ರಕಾಶ್ ತಿಳಿಸಿದರು.
ಅವರು, ಸೋಮವಾರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕ್ರೈಸ್ತ ಸಮುದಾಯವನ್ನು ಸಂಘಟಿಸಿ ಮುಖ್ಯವಾಹಿನಿಗೆ ತರಬೇಕಾಗಿದೆ. ಪ್ರತಿ ವರ್ಷ ಕ್ರಿಸ್ಮಸ್ ಹಬ್ಬದವನ್ನು ಅಂಧ ಮಕ್ಕಳೊಂದಿಗೆ ಆಚರಿಸುವುದು ಸೇರಿದಂತೆ ಅವರಿಗೆ ಅವಶ್ಯ ವಸ್ತುಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ 2017ರ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು. ಸಂಸ್ಥೆಯ ಕಾನೂನು ಸಲಹೆಗಾರ ಎಂ.ಎಸ್.ಮರಿಯದಾಸ್ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಸುದ್ದಿಗೋಷ್ಠಿಯಲ್ಲಿ ಗೌರವಾಧ್ಯಕ್ಷ ಪಿ.ಪ್ರಕಾಶ್ ಮೈಸೂರು, ಕಾರ್ಯದರ್ಶಿ ಸ್ಟಾಲಿನ್ ಜಿಂಗ್ಲರ್, ಉಪಾಧ್ಯಕ್ಷ ಎಂ.ಡಿ.ಆದಿಶ್ ಸಾಗರ್, ಖಜಾಂಚಿ ಜೆ.ವಿನೋದ್ ಕುಮಾರ್, ಕಾಂಗ್ರೆಸ್ ಮುಖಂಡ ಸುಂದರ್ ಡಿಸೋಜ ಉಪಸ್ಥಿತರಿದ್ದರು.