ಸುದ್ದಿ ಸಂಕ್ಷಿಪ್ತ

ಆ.5ರಂದು ಗಣ್ಯರ ಅಭಿನಂದನಾ ಸಮಾರಂಭ

ಮೈಸೂರು,ಆ.3 : ವಿಜಯನಗರದ 1ನೇ ಹಂತದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆ.5ರ ಸಂಜೆ 6 ಗಂಟೆಗೆ ಸಪ್ತಪದಿ ಕಲ್ಯಾಣ ಮಂಟಪದಲ್ಲಿ ಗಣ್ಯರ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿದೆ.

ಸಚಿವರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ, ಸಂಸದ ಪ್ರತಾಪ್ ಸಿಂಹ, ಶಾಸಕ ನಾಗೇಂದ್ರ, ಮಾಜಿ ಶಾಸಕ ವಾಸು, ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ ಮುಖ್ಯ ವಿಜ್ಞಾನಿ ಎ.ರಾಮಕೃಷ್ಣ ಇವರುಗಳನ್ನು ಅಭಿನಂದಿಸಲಾಗುವುದು.

ಸಂಘದ ಅಧ್ಯಕ್ಷ ಎಂ.ಕೆ.ನಂಜಯ್ಯ ಅಧ್ಯಕ್ಷತೆ ವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: