ಕರ್ನಾಟಕ

ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಲು ಆಗ್ರಹ : ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದ ಜಿ.ಪಂ.ಅಧ್ಯಕ್ಷ ಹರೀಶ್

ರಾಜ್ಯ(ಮಡಿಕೇರಿ) ಆ.3 :-ಪ್ರವಾಸೋದ್ಯಮ ಸಂಬಂಧ ಕೊಡಗು ಜಿಲ್ಲೆಯನ್ನು ಪೈಲೆಟ್ ಪ್ರೋಜೆಕ್ಟ್ ಮಾದರಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಒತ್ತು  ನೀಡಬೇಕಾಗಿ ಕೊಡಗು ಜಿಲ್ಲಾ ನೂತನ ಉಸ್ತುವಾರಿ ಸಚಿವರು ಹಾಗೂ ಪ್ರವಾಸೋದ್ಯಮ ಸಚಿವರಾದ ಸಾ.ರಾ.ಮಹೇಶ್ ಅವರಲ್ಲಿ ಜಿ.ಪಂ.ಅಧ್ಯಕ್ಷರಾದ ಬಿ.ಎ.ಹರೀಶ್ ಅವರು ಕೋರಿದ್ದಾರೆ.

ಕೊಡಗು ಜಿಲ್ಲೆಗೆ ಸುಮಾರು 16 ಲಕ್ಷ ಜನರು ಭೇಟಿ ನೀಡುತ್ತಿದ್ದಾರೆ. ಪ್ರವಾಸಿತಾಣಗಳ ಮೂಲಭೂತ ಸೌಕರ್ಯಗಳು ಅಭಿವೃದ್ಧಿಯಾಗಬೇಕು ಎಂದು ಮನವಿ ಮಾಡಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯಲ್ಲಿ ಮಂಜೂರಾದ 40 ಹುದ್ದೆಗಳಲ್ಲಿ 21 ಹುದ್ದೆಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಮಂಜೂರಾದ 47 ಹುದ್ದೆಗಳಲ್ಲಿ 43 ಹುದ್ದೆಗಳು, ತೋಟಗಾರಿಕಾ ಇಲಾಖೆಯಲ್ಲಿ ಮಂಜೂರಾದ 129 ಹುದ್ದೆಗಳಲ್ಲಿ 68 ಹುದ್ದೆಗಳು, ಕೃಷಿ ಇಲಾಖೆಯಲ್ಲಿ ಮಂಜೂರಾದ 144 ಹುದ್ದೆಗಳಲ್ಲಿ 98 ಹುದ್ದೆಗಳು, ಸಮಾಜ ಕಲ್ಯಾಣ ಇಲಾಖೆಯಲ್ಲಿ ಮಂಜೂರಾದ 149 ಹುದ್ದೆಗಳಲ್ಲಿ 79 ಹುದ್ದೆಗಳು, ಐ.ಟಿ.ಡಿ.ಪಿ ಇಲಾಖೆಯಲ್ಲಿ ಮಂಜೂರಾದ 164 ಹುದ್ದೆಗಳಲ್ಲಿ 92 ಹುದ್ದೆಗಳು, ಬಿಸಿಎಂ ಇಲಾಖೆಯಲ್ಲಿ ಮಂಜೂರಾದ 229 ಹುದ್ದೆಗಳಲ್ಲಿ 104 ಹುದ್ದೆಗಳು, ಆರೋಗ್ಯ ಇಲಾಖೆಯಲ್ಲಿ ಮಂಜೂರಾದ 940 ಹುದ್ದೆಗಳಲ್ಲಿ 486 ಹುದ್ದೆಗಳು, ಪಶುಪಾಲನಾ ಇಲಾಖೆಯಲ್ಲಿ ಮಂಜೂರಾದ 309 ಹುದ್ದೆಗಳಲ್ಲಿ 195 ಹುದ್ದೆಗಳು ಖಾಲಿ ಇದ್ದು, ಇವುಗಳನ್ನು ತ್ವರಿತವಾಗಿ ಭರ್ತಿ ಮಾಡಿವಂತಾಗಬೇಕು ಎಂದು ಜಿ.ಪಂ.ಅಧ್ಯಕ್ಷರು ಕೋರಿದ್ದಾರೆ.

ಕೊಡಗು ಜಿ.ಪಂ.ನಲ್ಲಿ ಉಪ ಕಾರ್ಯದರ್ಶಿ, ಮುಖ್ಯ ಲೆಕ್ಕಾಧಿಕಾರಿ, ಯೋಜನಾ ಅಂದಾಜು ಮತ್ತು ಮೌಲ್ಯಮಾಪನ ಅಧಿಕಾರಿ, ಸಹಾಯಕ ಯೋಜನಾಧಿಕಾರಿ (ಡಿಆರ್‍ಡಿಎ ಕೋಶ) ಹುದ್ದೆಗಳು ಮತ್ತು ವಿರಾಜಪೇಟೆ ಮತ್ತು ಸೋಮವಾರಪೇಟೆ ತಾ.ಪಂ. ಇಒ  ಹುದ್ದೆ ಖಾಲಿ ಇದ್ದು, ಪ್ರಮುಖ ಹುದ್ದೆಗಳು ಖಾಲಿ ಇರುವುದರಿಂದ ಆಡಳಿತ ವ್ಯವಸ್ಥೆ ಸೂಕ್ತ ರೀತಿಯಲ್ಲಿ ನಡೆಯಲು ಸಾಧ್ಯವಾಗುತ್ತಿಲ್ಲ. ಇದಲ್ಲದೆ ಜಿ.ಪಂ.ನಲ್ಲಿ ಮಂಜೂರಾದ 93 ಹುದ್ದೆಯಲ್ಲಿ ಕೇವಲ 29 ಮಾತ್ರ ಭರ್ತಿಯಾಗಿದ್ದು, 64 ಹುದ್ದೆಗಳು ಖಾಲಿ ಇರುತ್ತವೆ. ಆದ್ದರಿಂದ ಈ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕಾಗಿ ಸಚಿವರಲ್ಲಿ ಮನವಿ ಮಾಡಿದ್ದಾರೆ. ಕೊಡಗು ಜಿಲ್ಲೆಗೆ ಮಾನ್ಯ ಮುಖ್ಯ ಮಂತ್ರಿಗಳು ಜುಲೈ 19 ರಂದು ಭೇಟಿ ನೀಡಿ ಮಳೆ ಹಾನಿ ಪರಿಹಾರದ ಬಗ್ಗೆ ಪರಿಶೀಲನಾ ಸಭೆಯಲ್ಲಿ ಪಂಚಾಯತ್ ರಾಜ್ ಇಲಾಖೆಗೆ ಅನುದಾನ ಬಿಡುಗಡೆಗೆ ಕ್ರಮ ವಹಿಸುವುದಾಗಿ ತಿಳಿಸಿರುತ್ತಾರೆ. ಕೊಡಗು ಜಿಲ್ಲೆಯಲ್ಲಿ ವಿಪರೀತ ಮಳೆ ಹಾಗೂ ಗಾಳಿಯಿಂದ ಸಾರ್ವಜನಿಕ ಆಸ್ತಿ-ಪಾಸ್ತಿಗಳು ನಷ್ಟವಾಗಿದ್ದು, 448.81 ಕಿಮೀ. ರಸ್ತೆ ಹಾನಿಯಾಗಿದ್ದು,  ರೂ.43.20 ಕೋಟಿ, 21 ಸೇತುವೆಗಳು/ ಮೋರಿಗಳು ಹಾನಿಯಾಗಿದ್ದು ರೂ.1.50 ಕೋಟಿ, 27 ಕಟ್ಟಡಗಳು ಹಾನಿಯಾಗಿದ್ದು, ರೂ.4.42 ಕೋಟಿ, 64 ಇತರೆ (ತಡೆಗೋಡೆಗಳು) ಹಾನಿಯಾಗಿದ್ದು, 30.79 ಕೋಟಿ ರೂ.ಗಳು ನಷ್ಟವಾಗಿ. ಒಟ್ಟು 79.91 ಕೋಟಿ ರೂ. ನಷ್ಟವಾಗಿದೆ. ಇದಲ್ಲದೆ 558.23 ಕಿ.ಮೀ, ರಸ್ತೆ ಅಭಿವೃದ್ಧಿಗೆ 69.78 ಕೋಟಿ ರೂ., 28 ಸೇತುವೆ ಅಭಿವೃದ್ಧಿಗೆ 6 ಕೋಟಿ ರೂ. 37 ತಡೆಗೋಡೆ ನಿರ್ಮಾಣಕ್ಕೆ 1.50 ಕೋಟಿ ಒಟ್ಟು 77.28 ಕೋಟಿ ರೂ.ಗಳಲ್ಲಿ ಕಾಮಗಾರಿ ಕೈಗೊಳ್ಳಬೇಕಾಗಿದೆ ಎಂದು ಮನವಿ ಪತ್ರದಲ್ಲಿ ಕೋರಿದ್ದಾರೆ.  ಕೊಡಗು ಜಿಲ್ಲೆಯಲ್ಲಿ ಕಳೆದ 10-15 ವರ್ಷಗಳಿಂದ ಹಿಪ್ಪುನೇರಳೆ ವಿಸ್ತೀರ್ಣವು ಗಣನೀಯವಾಗಿ ಇಳಿಮುಳವಾಗಿರುತ್ತದೆ. ಜಿಲ್ಲೆಯಲ್ಲಿ ಬೆಳೆಯುತ್ತಿದ್ದ ದ್ವಿತಳಿ ಗೂಡುಗಳು ಉತ್ತಮ ಗುಣಮಟ್ಟದಾಗಿದ್ದರಿಂದ ಕೊಡಗು ಜಿಲ್ಲೆಯಲ್ಲಿ ದ್ವಿತಳಿ ಬಿತ್ತನೆ ವಲಯವೆಂದು ಇಲಾಖೆಯು ಘೋಷಿಸಿರುತ್ತದೆ. ಇಡೀ ಜಿಲ್ಲೆಯಲ್ಲಿ ಕೇವಲ ಒಬ್ಬರು ವಿಸ್ತರಣಾ ಸಿಬ್ಬಂದಿ ಇದ್ದು, ರೇಷ್ಮೆ ಕೃಷಿ ಚಟುವಟಿಕೆಯಲ್ಲಿ ಪುನಃಶ್ಚೇತನಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಾಗಿ ಜಿ.ಪಂ.ಅಧ್ಯಕ್ಷರು ಕೋರಿದ್ದಾರೆ.    (ಕೆಸಿಐ,ಎಸ್.ಎಚ್)

Leave a Reply

comments

Related Articles

error: