ಮೈಸೂರು

ಹುಡುಗಿ ವಿಚಾರಕ್ಕೆ ಚಾಕುವಿನಿಂದ ಹಲ್ಲೆ : ದೂರು

ಮೈಸೂರು,ಆ.4:- ಹುಡುಗಿಯೋರ್ವಳ ವಿಚಾರಕ್ಕೆ ಸಂಬಂಧಿಸಿದಂತೆ ಹುಡುಗರ ನಡುವೆ ಮಾತಿನ ವಾಗ್ವಾದ ನಡೆದು ಓರ್ವನಿಗೆ ಚಾಕುವಿನಿಂದ ಹಲ್ಲೆ ಮಾಡಿದ ಘಟನೆ ಬೋಗಾದಿ 2ನೇ ಹಂತದಲ್ಲಿ ನಡೆದಿದೆ.

ಹಲ್ಲೆಗೊಳಗಾದ ಸೌರವ್ ಚೆಂಗಪ್ಪ ಎಂಬಾತ ಈ ಕುರಿತು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮಾತಾ ಅಮೃತಾನಂದಮಯಿ ಕಾಲೇಜಿನಲ್ಲಿ 2 ನೇ ವರ್ಷದ ಬಿ.ಸಿ.ಎ ವ್ಯಾಸಂಗ ಮಾಡುತ್ತಿದ್ದು,  ಜು.2ರಂದು ಮಧ್ಯಾಹ್ನ ಸುಮಾರು 1.15 ರ ಸಮಯದಲ್ಲಿ ಕಾಲೇಜಿನ ಗೇಟ್ ಮುಂಭಾಗ ನಡೆದುಕೊಂಡು ಹೋಗುತ್ತಿರುವಾಗ ಕಾರ್ ನಂಬರ್ ಕೆ.ಎ-01-ಎ.ಡಿ-8993 ಕಾರಿನಲ್ಲಿ ಬಂದ ಧೀಮಂತ್ ಮತ್ತು ಆತನ ಇಬ್ಬರು ಸ್ನೇಹಿತರು ನನ್ನನ್ನು  ಸುತ್ತುವರೆದು ಅಡ್ಡಗಟ್ಟಿ  ನನ್ನ ಹುಡುಗಿಯ ವಿಚಾರಕ್ಕೆ ಬರುತ್ತೀಯಾ ಎಂದು ಕೂಗುತ್ತಾ ಚಾಕುಗಳಿಂದ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: