ಪ್ರಮುಖ ಸುದ್ದಿ

ಮಹಾರಾಷ್ಟ್ರಾ ನಗರ ಸಭೆಗಳಲ್ಲಿ ಬಿಜೆಪಿ ಗೆಲುವು : ಮುಗ್ಗರಿಸಿದ ಕಾಂಗ್ರೆಸ್

ದೇಶ(ಮುಂಬೈ)ಆ.4:- ಮಹಾರಾಷ್ಟ್ರದ ಸಾಂಗ್ಲಿ ಹಾಗೂ ಜಲಗಾಂವ್ ನಗರ ಸಭೆಗಳಿಗೆ ಚುನಾವಣೆ ನಡೆದಿದ್ದು, ಈ ಎರಡೂ ನಗರಸಭೆಗಳಲ್ಲಿ ಬಿಜೆಪಿ ಪಕ್ಷವು ಗೆಲುವು ಸಾಧಿಸಿದೆ ಎಂದು ತಿಳಿದು ಬಂದಿದೆ.

ಎರಡನೇ ಅವಧಿಗೆ ಜಲಗಾಂವ್ ಪ್ರದೇಶವನ್ನು ಬಿಜೆಪಿ ತನ್ನದಾಗಿಸಿಕೊಂಡರೆ, ಕಾಂಗ್ರೆಸ್ ಆಡಳಿತದಲ್ಲಿದ್ದ ಸಾಂಗ್ಲಿಯಲ್ಲೂ ಬಿಜೆಪಿ ವಿಜಯಪತಾಕೆ ಹಾರಿಸಿದೆ, ಒಟ್ಟು 75 ವಾರ್ಡ್‍ಗಳಿದ್ದು, ಉತ್ತರ ಮಹಾರಾಷ್ಟ್ರದ ಜಲಗಾಂವ್ ನಲ್ಲಿನ ನಗರಸಭೆಯಲ್ಲಿ 57 ವಾರ್ಡ್‍ಗಳನ್ನು ಬಿಜೆಪಿ ತನ್ನದಾಗಿಸಿಕೊಂಡಿದೆ. ಶಿವಸೇನೆ ಪಕ್ಷವು 15 ವಾರ್ಡ್‍ಗಳಲ್ಲಿ ಜಯಗಳಿಸಿದ್ದು, ಇನ್ನು ಕಾಂಗ್ರೆಸ್ ಹಾಗೂ ಎನ್ ಸಿಪಿ ಪಕ್ಷಗಳು ಶೂನ್ಯ ಸಂಪಾದಿಸಿವೆ.

8 ವಾರ್ಡ್‌ಗಳ, ಪಶ್ಚಿಮ ಮಹಾರಾಷ್ಟ್ರದ ಸಾಂಗ್ಲಿ-ಮೀರಜ್‌-ಕುಪ್ವಾಡ್‌ ನಗರಸಭೆಯಲ್ಲಿ ಬಿಜೆಪಿ 41 ವಾರ್ಡ್‌ಗಳನ್ನು ತನ್ನದಾಗಿಸಿದೆ. ಕಳೆದ ಬಾರಿ ಕಾಂಗ್ರೆಸ್‌ 41 ವಾರ್ಡ್‌ಗಳ ಹಿಡಿತ ಹೊಂದಿದ್ದ ಈ ನಗರಸಭೆಯಲ್ಲಿ ಬಿಜೆಪಿ ಒಂದೂ ವಾರ್ಡ್‌ನಲ್ಲಿ ಗೆದ್ದಿರಲಿಲ್ಲ. ಈ ಬಾರಿ ಕಾಂಗ್ರೆಸ್‌ 20ರಲ್ಲಷ್ಟೇ ಗೆದ್ದಿದೆ. ಎನ್‌ಸಿಪಿ 15ರಲ್ಲಿ ಜಯ ಸಾಧಿಸಿದೆ. ಶಿವಸೇನೆ ಶೂನ್ಯ ಸಾಧನೆಗೈದಿದೆ. ಶಿವಸೇನೆ ಯೊಂದಿಗೆ ಮೈತ್ರಿ ಮಾಡಿಕೊಳ್ಳದೆ ಬಿಜೆಪಿ ಎರಡೂ ಕಡೆ ಜಯಭೇರಿ ಬಾರಿಸಿದ್ದರೆ, ಕಾಂಗ್ರೆಸ್‌ ಹಾಗೂ ಎನ್‌ಸಿಪಿ ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡರೂ ಮುಗ್ಗರಿಸಿವೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: