ಮೈಸೂರು

ಸ್ಥಳೀಯ ಸಂಸ್ಥೆಗಳ ಚುನಾವಣೆ : ಮತದಾರರ ವಿವರ

ಮೈಸೂರು, ಆ.4 : ಸ್ಥಳೀಯ ಸಂಸ್ಥೆಗಳ ಚುನಾವಣೆಯು ಘೋಷಣೆಯಾಗಿದ್ದು, ತಾಲ್ಲೂಕಿನ  ನಗರ ಸ್ಥಳೀಯ ಸಂಸ್ಥೆಯ ವಿವರ ಈ ರೀತಿ ಇದೆ. ಟಿ.ನರಸೀಪುರ ಪುರಸಭೆ -23,  ಪಿರಿಯಾಪಟ್ಟಣ ಪುರಸಭೆ – 23, ಹೆಚ್.ಡಿ.ಕೋಟೆ ಪುರಸಭೆ  – 23 ಸೇರಿದಂತೆ ಒಟ್ಟು  69 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಒಟ್ಟು ಮತದಾರರು :

1    ಟಿ.ನರಸೀಪುರ ಪುರಸಭೆ    (ಪುರುಷರು) 12977,  (ಮಹಿಳೆಯರು)   13314   ಒಟ್ಟು 26291
2    ಪಿರಿಯಾಪಟ್ಟಣ ಪುರಸಭೆ     (ಪುರುಷರು) 8283   (ಮಹಿಳೆಯರು) 8606  ಒಟ್ಟು  16889
3    ಹೆಚ್.ಡಿ.ಕೋಟೆ ಪುರಸಭೆ        (ಪುರುಷರು)8683   (ಮಹಿಳೆಯರು) 8791 ಒಟ್ಟು   17474.
(ಪುರುಷರು)29943 (ಮಹಿಳೆಯರು)  30711 ಸೇರಿದಂತೆ ಒಟ್ಟು 69 ವಾರ್ಡ್ ಗಳಿಂದ 60654 ಮತದಾರಿದ್ದಾರೆ.

ಇದಲ್ಲದೇ ಮತದಾರರ ಪಟ್ಟಿ ಪರಿಷ್ಕರಣೆಯಿಂದ 1400 ಕ್ಕೂ ಅಧಿಕ ಮತದಾರರಾಗುವ ಮತಗಟ್ಟೆಗಳಿಗೆ ಆಕ್ಸಿಲರಿ ಮತಗಟ್ಟೆಗಳನ್ನು ಸ್ಥಾಪಿಸಲು ಕ್ರಮವಹಿಸಲಾಗುವುದು.
ಚುನಾವಣೆ ಸಂಬಂಧ ಮತದಾರರ ಪಟ್ಟಿಯನ್ನು ಸಿದ್ದಪಡಿಸಲಾಗಿದ್ದು, ಮತದಾರರ ಪಟ್ಟಿಯನ್ನು  ತಹಶೀಲ್ದಾರ್, ಟಿ.ನರಸೀಪುರ, ಪಿರಿಯಾಪಟ್ಟಣ ಮತ್ತು ಹೆಚ್.ಡಿ.ಕೋಟೆ ರವರಲ್ಲಿ ಪಡೆದುಕೊಳ್ಳಬಹುದಾಗಿದೆ.

ಮತಗಟ್ಟೆ ಅಧಿಕಾರಿಗಳ ನೇಮಕ:  ಪ್ರತಿ ಮತಗಟ್ಟೆಗೆ ಒಬ್ಬರು ಅಧ್ಯಕ್ಷಾಧಿಕಾರಿ ಹಾಗೂ ಮೂವರು ಮತಗಟ್ಟೆ ಅಧಿಕಾರಿಗಳನ್ನು ನೇಮಕ ಮಾಡಲು ಕ್ರಮವಹಿಸಲಾಗಿದೆ.   ಮತಗಟ್ಟೆ ಅಧಿಕಾರಿಗಳಿಗೆ 1 ಹಂತದಲ್ಲಿ ತರಬೇತಿಯನ್ನು ನೀಡಲಾಗುವುದು.
ಅಭ್ಯರ್ಥಿಗಳ ಚುನಾವಣಾ ವೆಚ್ಚಗಳ ಪರಿಶೀಲನೆಗಾಗಿ ನೋಡೆಲ್ ಅಧಿಕಾರಿಗಳ ನೇಮಕ:
ಅಭ್ಯರ್ಥಿಗಳು ಚುನಾವಣಾ ವೆಚ್ಚದ ವಿವರವನ್ನು ನಾಮಪತ್ರ ಸಲ್ಲಿಸಿದ ದಿನಾಂಕದಿಂದ ಫಲಿತಾಂಶ ಘೋಷಣೆಯಾಗುವ ದಿನಾಂಕದವರೆಗೆ ಈ ಕೆಳಕಂಡಂತೆ ಗರಿಷ್ಟ ಮಿತಿಗೆ ಒಳಪಟ್ಟು ಚುನಾವಣಾ ವೆಚ್ಚಗಳನ್ನು ಮಾಡಬಹುದಾಗಿರುತ್ತದೆ.
ಅಭ್ಯರ್ಥಿಗಳು ಪ್ರತಿದಿನ ಮಾಡುವ ವೆಚ್ಚಗಳನ್ನು ತಪಾಸಣೆ ಮಾಡಲು ಹಾಗೂ ಅಭ್ಯರ್ಥಿಗಳು ಉಪಯೋಗಿಸುವ ವಾಹನಗಳ ವಿವರ, ಪ್ರಚಾರಕ್ಕಾಗಿ ಪ್ರಕಟಿಸುವ ಕರಪತ್ರಗಳ ವಿವರ, ಪ್ರಕಟಣೆ, ಪೋಸ್ಟರ್‍ಗಳು, ಬ್ಯಾನರ್‍ಗಳು ಇತ್ಯಾದಿಗಳ ವೋಚರ್‍ಗಳ ಹಾಗೂ ಚುನಾವಣಾ ವೆಚ್ಚದ ಲೆಕ್ಕವನ್ನು ಪರಿಶೀಲಿಸಲು ಒಟ್ಟು 6 ಜನ ಅಧಿಕಾರಿಗಳನ್ನು ನೋಡೆಲ್ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.
ಆ.2  ರಿಂದ ಸೆ.1ರವರೆಗೆ  ಸದಾಚಾರ ಸಂಹಿತೆಯು ಜಾರಿಯಲ್ಲಿರುತ್ತದೆ.
ವಿದ್ಯುನ್ಮಾನ ಮತಯಂತ್ರಗಳು: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಲಾಗುತ್ತಿದ್ದು, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂಬಂಧ ಯಾವುದೇ ಮಾಹಿತಿಗಳು ಬೇಕಾದಲ್ಲಿ ಈ ಕೆಳಕಂಡ ದೂರವಾಣಿಯನ್ನು ಸಂಪರ್ಕಿಸಬಹುದಾಗಿದೆ. ಟಿ.ನರಸೀಪುರ ತಾಲ್ಲೂಕು 08227-260210, ಪಿರಿಯಾಪಟ್ಟಣ ತಾಲ್ಲೂಕು 08223-273175, ಹೆಚ್.ಡಿ.ಕೋಟೆ ತಾಲ್ಲೂಕು 08228-255325 ಸಂಪರ್ಕಿಸಬಹುದಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: