
ಮನರಂಜನೆ
ಒಡೆಯರ್ ಚಿತ್ರದ ಶೀರ್ಷಿಕೆ ಬದಲು : ‘ಒಡೆಯ’ನಾದ ಚಾಲೆಂಜಿಂಗ್ ಸ್ಟಾರ್
ರಾಜ್ಯ(ಬೆಂಗಳೂರು)ಆ.4:- ಸಂದೇಶ್ ನಾಗರಾಜ್ ನಿರ್ಮಾಣದ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯರ್ ಚಿತ್ರದ ಶೀರ್ಷಿಕೆ ಬದಲಾಗಿದ್ದು, ‘ಒಡೆಯ ಎಂದಾಗಿದೆ.
ಈ ಕುರಿತು ಸ್ಪಷ್ಟಪಡಿಸಿರುವ ಚಿತ್ರ ತಂಡ ಒಡೆಯರ್ ಬದಲು ಒಡೆಯ ಎಂದು ಬದಲಾಯಿಸಲಾಗಿದೆ ಎಂದು ತಿಳಿಸಿದೆ. ಈಗಾಗಲೇ ಮೈಸೂರು ರಾಜಮನೆತನದ ಅಭಿಮಾನಿಗಳು ಒಡೆಯರ್ ಹೆಸರಿಟಿದ್ದಕ್ಕೆ ಪ್ರತಿಭಟನೆ ನಡೆಸಿದ್ದರಲ್ಲದೇ, ದೂರನ್ನು ದಾಖಲಿಸಿದ್ದರು. ರಾಜಮಾತೆ ಪ್ರಮೋದಾದೇವಿ ಒಡೆಯರ್ ಹೆಸರಿಟ್ಟಿರುವುದಕ್ಕೆ ಆಕ್ಷೇಪವಿಲ್ಲ. ಮನೆತನದ ಕುರಿತು ಬಂದರೆ ಆಕ್ಷೇಪವಿದೆ ಎಂದಿದ್ದರು. ಇದೀಗ ಚಿತ್ರದ ಶಿರ್ಷಿಕೆಯನ್ನು ಒಡೆಯ ಎಂದು ಬದಲಾಯಿಸಿರುವುದು ಹಲವು ಗೊಂದಲಗಳಿಗೆ ತೆರೆ ಎಳೆದಂತಾಗಿದೆ. ಆ.16ರಂದು ಚಿತ್ರ ಮುಹೂರ್ತ ಕಾಣಲಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರೆಬೆಲ್ ಸ್ಟಾರ್ ಅಂಬರೀಶ್ ಪಾಲ್ಗೊಳ್ಳಲಿದ್ದಾರಂತೆ. ಅಂದು ನಿರ್ಮಾಪಕ ಸಂದೇಶ್ ನಾಗರಾಜ್ ಅವರ ಜನ್ಮ ದಿನ ಕೂಡ ಎಂದು ಹೇಳಲಾಗಿದೆ. (ಕೆ.ಎಸ್,ಎಸ್.ಎಚ್)