ಪ್ರಮುಖ ಸುದ್ದಿ

ಒಕ್ಕಲಿಗರ ಭವನ ನಿರ್ಮಾಣಕ್ಕೆ ಮನವಿ

ರಾಜ್ಯ(ಮಡಿಕೇರಿ) ಆ.4 :-  ಒಕ್ಕಲಿಗರ ಭವನ ನಿರ್ಮಾಣಕ್ಕೆ ಸೂಕ್ತ ನಿವೇಶನವನ್ನು ಮಂಜೂರು ಮಾಡಬೇಕೆಂದು ಮಡಿಕೇರಿ ತಾಲೂಕು ಒಕ್ಕಲಿಗರ ಸಂಘದ ಪದಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಉಸ್ತುವಾರಿ ಸಚಿವರಾಗಿ ನೇಮಕಗೊಂಡ ನಂತರ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ ಸಚಿವರನ್ನು ಅಭಿನಂದಿಸಿದ ಪ್ರಮುಖರು ಬೇಡಿಕೆಯ ಮನವಿ ಪತ್ರವನ್ನು ಸಲ್ಲಿಸಿದರು.

ಈ ಸಂದರ್ಭ ಸಂಘದ ಅಧ್ಯಕ್ಷ ವಿ.ಜಿ.ಮೋಹನ್, ಕಾರ್ಯದರ್ಶಿ ಕುಶಾಲಪ್ಪ, ಖಜಾಂಚಿ ಕೆ.ರಮೇಶ್, ನಿರ್ದೇಶಕರಾದ ನಿರಂಜನ್, ಬಿ.ಡಿ.ಮಂಜುನಾಥ್, ವಿ.ಎಂ.ಧನಂಜಯ, ದಿನೇಶ್, ರಮೇಶ್, ವಿಜಯ್, ಮನುಕುಮಾರ್, ಕೆರೆಮನೆ ವಿನಾಯಕ, ಭರತ್, ಪುಟ್ಟರಾಜು,  ಧರ್ಮಪ್ಪ, ಮೂರ್ತಿ ಪ್ರಸಾದ್, ಸತೀಶ್, ಮೋಹನ್ ಮತ್ತಿತರ ಪ್ರಮುಖರು ಹಾಜರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: