ಲೈಫ್ & ಸ್ಟೈಲ್

ಈರುಳ್ಳಿ ಬಳಸಿ ಮೀಸೆ, ತಲೆಗೂದಲು ಕಪ್ಪಗಾಗಿಸಬಹುದು

ಯಾವ ಪುರುಷರೂ ತಮ್ಮ ತಲೆ ಕೂದಲು ಹಾಗೂ ಮೀಸೆ ಬೇಗನೆ ಬೆಳ್ಳಗಾಗುವುದನ್ನು ಸಹಿಸಲಾರರು. ಆದರೆ ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗಲಾರಂಭಿಸುತ್ತವೆ. ಅದನ್ನು ತಡೆಯಲು ಮನೆಯಲ್ಲಿಯೇ ಮಾಡಬಹುದಾದ ಕೆಲವು ಉಪಾಯಗಳಿವೆ.

>> ಹಸುವಿನ ಹಾಲಿನಿಂದ ತಯಾರಿಸಿದ ಬೆಣ್ಣೆಯನ್ನು ಪ್ರತಿನಿತ್ಯ ತಲೆಗೆ ಹಾಗೂ ಮೀಸೆಯ ಕೂದಲಿಗೆ ಹಚ್ಚಿ ಮಾಲೀಶ್ ಮಾಡುವುದರಿಂದ ಕೂದಲು ಬೆಳ್ಳಗಾಗುವುದನ್ನು ತಡೆಯಬಹುದು.

>> ಕರಿಬೇವು ಎಲೆಯನ್ನು ತೆಂಗಿನೆಣ್ಣೆಗೆ ಹಾಕಿ ಕುದಿಸಿ, ಬಳಿಕ ತಣ್ಣಗಾದ ಮೇಲೆ ಅದನ್ನು ತಲೆಗೆ ಹಚ್ಚಿಕೊಳ್ಳಿ.

>> ಅರ್ಧ ಲೋಟ ನೀರಿಗೆ ಎರಡು ಚಮಚ ಸಕ್ಕರೆ ಹಾಕಿ ಬೆರೆಸಿ, ಇದರಲ್ಲಿ ಅರ್ಧ ಚಮಚ ನಿಂಬು ರಸವನ್ನು ಸೇರಿಸಿ ಬಳಿಕ ಅದನ್ನು ಹಚ್ಚಿಕೊಂಡರೆ ಕಪ್ಪಾಗಿಯೇ ಇರುತ್ತದೆ.

>> ಪ್ರತಿದಿನ ಪುದಿನ ಎಲೆ ಹಾಕಿ ತಯಾರಿಸಿದ ಚಹಾವನ್ನು ಕುಡಿಯುವುದರಿಂದ ಗಡ್ಡದ ಕೂದಲು ಬೆಳ್ಳಗಾಗುವುದನ್ನು ತಪ್ಪಿಸಬಹುದು.

>> ಎರಡು ಚಮಚ ಈರುಳ್ಳಿ ರಸವನ್ನು ಪುದಿನ ಎಲೆಯ ರಸದೊಂದಿಗೆ ಬೆರೆಸಿ ಗಡ್ಡ ಮತ್ತು ಮೀಸೆಗೆ ಹಚ್ಚುವುದರಿಂದ ಬೆಳ್ಳಿ ಕೂದಲು ತಡೆಯಬಹುದು.

ಮೇಲೆ ಹೇಳಿರುವುದನ್ನು ವಾರಕ್ಕೆ ಮೂರು ಬಾರಿಯಾದರೂ ಮಾಡಿದಲ್ಲಿ ಬಿಳಿಕೂದಲನ್ನು ತಡೆಯಬಹುದು.

Leave a Reply

comments

Related Articles

error: