ಮೈಸೂರು

ಮತದಾರರ ಪಟ್ಟಿ ಪರಿಷ್ಕರಣೆ ಕೆಲಸಕ್ಕೆ ಗೈರಾದ ನಾಲ್ವರು ಶಿಕ್ಷಕರು ಅಮಾನತು

ಮೈಸೂರು,ಆ.6:- ಮತದಾರರ ಪಟ್ಟಿ ಪರಿಷ್ಕರಣೆ ಕೆಲಸಕ್ಕೆ ಗೈರಾದ ನಾಲ್ವರು ಶಿಕ್ಷಕರನ್ನು ಅಮಾನತು ಮಾಡಿ , ಉಳಿದ 7 ಮಂದಿ ಶಿಕ್ಷಕರಿಗೆ ಜಿಲ್ಲಾಡಳಿತ ನೋಟೀಸ್ ನೀಡಿದೆ.

ಬಬಿತಾ ರಾಣಿ, ಎ.ಎಸ್.ಮಹದೇವು, ಬಿ.ಎಸ್.ಮಂಜುನಾಥ್, ವಸಂತಕುಮಾರ್ ಅಮಾನತುಗೊಂಡವರಾಗಿದ್ದು, ಮತದಾರರ ಪಟ್ಟಿ ಪರಿಷ್ಕರಣೆ ಕೆಲಸಕ್ಕೆ ಶಿಕ್ಷಕರನ್ನು ನಿಯೋಜಿಸಲಾಗಿತ್ತು. ಇದರಲ್ಲಿ 12ಮಂದಿ ಗೈರಾಗಿದ್ದರು. ಅವರಿಗೆ ಉಪವಿಭಾಗಾಧಿಕಾರಿ ನೋಟೀಸ್ ನೀಡಿದ್ದರು. ಈ ಕ್ರಮವನ್ನು ಐವರು ಶಿಕ್ಷಕರು ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. ಆ ಬಳಿಕ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: