ಮೈಸೂರು

ನಮ್ಮ ಜೊತೆ ಕೊನೆಯವರೆಗೂ ಉಳಿಯುವುದು ಕಲಿತ ವಿದ್ಯೆ ಮಾತ್ರ : ಸಚಿವ ಜಿ.ಟಿ.ದೇವೇಗೌಡ

ಮೈಸೂರು,ಆ.6:- ನಮ್ಮ ಜೊತೆ ಕೊನೆಯವರೆಗೂ ಉಳಿಯುವುದು ಕಲಿತ ವಿದ್ಯೆ ಮಾತ್ರ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು.

ಎಸ್ ಬಿಆರ್ ಆರ್ ಮಹಾಜನ ಪ್ರಥಮದರ್ಜೆ ಕಾಲೇಜಿನ ಅಬ್ದುಲ್ ಕಲಾಂ ರಜತ ಭವನದ ಸಭಾಂಗಣದಲ್ಲಿಂದು ವಿದ್ಯಾರ್ಥಿ ಸಂಸತ್ ಮತ್ತು ಪ್ರತಿಭಾ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಉನ್ನತ ಶಿಕ್ಷಣವೆಂಬುದು ಮಹೋನ್ನತವಾದ್ದೆಂದು ಉನ್ನತ ಶಿಕ್ಷಣ  ಖಾತೆ ವಹಿಸಿದ ಮೇಲೆಯೇ ನನಗೆ ಅರಿವಾಗಿದ್ದು, ಕೊನೆಯವರೆಗೂ ನಮ್ಮ ಜತೆ ಉಳಿಯುವುದು ನಾವು ಕಲಿತ ವಿದ್ಯೆ ಮಾತ್ರ ಎಂದರು.

ಶಿಕ್ಷಣ ಕ್ಷೇತ್ರದಲ್ಲಿ ಕೌಶಲ್ಯಾಧಾರಿತ ಶಿಕ್ಷಣಕ್ಕಿಂತ ಮೌಲ್ಯಧಾರಿತ ಶಿಕ್ಷಣದ ಕಡೆಗೆ ಗಮನ ಕೊಡುವುದು ಹೆಚ್ಚಾಗಿದೆ. ಮೌಲ್ಯಧಾರಿತ ಶಿಕ್ಷಣ ಹಾಗೂ ಕೌಶಲ್ಯಾಧಾರಿತ ಶಿಕ್ಷಣದ ಜೊತೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಪರಿಣಿತಿ ಪಡೆದವರೊಟ್ಟಿಗೆ ಶಿಕ್ಷಣ ನೀಡುವ ಕೆಲವಾಗಬೇಕಿದೆ. ವಿದ್ಯಾರ್ಥಿಗಳ ಜೀವನದ ಪ್ರತಿಯೊಂದು ಹಂತವು ಸುಗಮವಾಗಿರಬೇಕೆಂದರೆ, ಮೊದಲು ಮನೆಯಿಂದಲೇ ಮೌಲ್ಯವುಳ್ಳ ಶಿಕ್ಷಣ ಆರಂಭವಾಗಬೇಕು. ತಂದೆ -ತಾಯಿಗಳ ಆಶೀರ್ವಾದದಿಂದ ವಿದ್ಯಾರ್ಥಿಗಳು ತಮ್ಮ ಜೀವನದ ಸ್ಪಷ್ಟವಾದ ದಾರಿಕಂಡುಕೊಳ್ಳಬೇಕು ಎಂದರು. 10 ವರ್ಷಗಳಿಂದ ಖಾಲಿ ಇರುವ ಉಪನ್ಯಾಸಕರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಇನ್ನೂ ಒಂದು ವರ್ಷದಲ್ಲಿ 5ಸಾವಿರ ಉಪನ್ಯಾಸಕರನ್ನು ನೇಮಕ ಮಾಡಲಾಗುವುದು. ಇನ್ನೊಂದು ವರ್ಷದಲ್ಲಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿಯೇ ಮಾಡಿ ತಿರುತ್ತೇನೆ ಎಂದು ತಿಳಿಸಿದರು.

ಸತತ ಪ್ರಯತ್ನಗಳು ವಿದ್ಯಾರ್ಥಿಗಳನ್ನು ಯಶಸ್ಸಿನತ್ತ ಮುನ್ನಡೆಸಲು ಸಹಕಾರಿಯಾಗಲಿದೆ. ಕಲೆ, ಸಾಹಿತ್ಯ, ಕ್ರೀಡೆ, ಸಂಸ್ಕೃತಿಗಳ ಸಂಗಮದೊಂದಿಗೆ, ಸುಂದರ ಸ್ವಸ್ಥ ಸಮಾಜವನ್ನು ಕಟ್ಟುವ ಕೆಲಸವನ್ನು ಮಾಡಬೇಕು ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಸಣ್ಣ ನೀರಾವರಿ ಸಚಿವರಾದ ಸಿ.ಎಸ್.ಪುಟ್ಟರಾಜು, ವಕೀಲ ಶ್ಯಾಂ ಭಟ್ ,ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಟಿ.ಮುರಳೀಧರ್ ಭಾಗವತ್, ಗೌರವಕಾರ್ಯದರ್ಶಿ ಡಾ.ವಿಜಯಲಕ್ಷ್ಮಿ ಮುರಳೀಧರ್, ನಿರ್ದೇಶಕ ಪ್ರೊ.ಸಿ.ಕೆ.ರೇಣೂಕಾಚಾರ್ಯ, ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಎಸ್.ಆರ್.ರಮೇಶ್, ಮಹಾಜನ ವಿದ್ಯಾಸಂಸ್ಥೆಯ ಅಧ್ಯಕ್ಷ ವಾಸುದೇವಮೂರ್ತಿ ಮತ್ತಿತರರು ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: