
ಪ್ರಮುಖ ಸುದ್ದಿ
ಅಕ್ರಮವಾಗಿ ಹಸು ಸಾಗಾಟ : ಇಬ್ಬರ ಬಂಧನ,ವಾಹನ ವಶಕ್ಕೆ
ರಾಜ್ಯ(ಮಂಗಳೂರು)ಆ.6:- ಅಕ್ರಮವಾಗಿ ಕೇರಳಕ್ಕೆ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ತಂಡವನ್ನು ಪತ್ತೆ ಹಚ್ಚಿದ ವಿಟ್ಲ ಪೊಲೀಸರು ಎರಡು ಹಸು, ವಾಹನ ಹಾಗೂ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಂಡ ಘಟನೆ ಪುಣಚ ಗ್ರಾಮದಲ್ಲಿ ನಡೆದಿದೆ.
ಬಂಧಿತರನ್ನು ಕೇರಳದ ಉಪ್ಪಳ ನಿವಾಸಿ ಅಬೂಬಕ್ಕರ್(52) ಹಾಗೂ ರಾಜ್ಕುಮಾರ್(40) ಎಂದು ಗುರುತಿಸಲಾಗಿದೆ. ಇವರು ಪುಣಚ ಗ್ರಾಮದ ಚಂದಳಿಕೆ-ಮಾಡತ್ತಡ್ಕ ರಸ್ತೆಯ ಕಂಬಳಿಮೂಲೆ ಎಂಬಲ್ಲಿ ಕೇರಳದ ಕಸಾಯಿಖಾನೆಗೆ ಅಕ್ರಮವಾಗಿ ಎರಡು ಹಸುವನ್ನು ಸಾಗಾಟ ಮಾಡುತ್ತಿದ್ದರೆನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡ ವಿಟ್ಲ ಎಸ್ ಐ ಎಚ್.ಈ ನಾಗರಾಜ್ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ.
ಕೇರಳ ನೋಂದಾವಣೆಯ ವಾಹನ, ಹಸುಗಳ ಒಟ್ಟು ಮೌಲ್ಯ 2.50 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. (ಕೆ.ಎಸ್,ಎಸ್.ಎಚ್)