ಮೈಸೂರು

ಗನ್ ಹೌಸ್ ಬಳಿ ರಸ್ತೆ ಸಂಚಾರಕ್ಕೆ ಮುಕ್ತ : ಹಸಿರು ನಿಶಾನೆ ತೋರಿದ ಶಾಸಕರು

ಮೈಸೂರು,ಆ.6:- ದಶಕಗಳ ಕಾಲದಿಂದ ಮೈಸೂರು  ಊಟಿ ಮುಖ್ಯ ರಸ್ತೆಯಲ್ಲಿ ದೊಡ್ಡಕೆರೆ ಮೈದಾನದ ಭಾಗದಲ್ಲಿ ಬಸ್ ಗಳ ಸಂಚಾರಕ್ಕೆ ತುಂಬಾ ಸಮಸ್ಯೆಯಿದ್ದು, ಅಪಘಾತ ವಲಯ ಕೂಡ ಆಗಿತ್ತು. ಈ ರಸ್ತೆ ರಾಷ್ಟ್ರೀಯ ಹೆದ್ದಾರಿಯಾದ ಮೇಲೆ ರಸ್ತೆ ಅಗಲೀಕರಣ ಮಾಡಿ ನಂಜನಗೂಡು ಚಾಮರಾಜ ನಗರಗಳಿಗೆ ಹೋಗುವ ಬಸ್ ಗಳಿಗೆ ಸುಗಮ ವ್ಯವಸ್ಥೆ ಕಲ್ಪಿಸಿದ್ದು, ಶಾಸಕ ಎಸ್.ಎ.ರಾಮದಾಸ್ ಇಂದು ಹಸಿರು ನಿಶಾನೆ ತೋರಿಸುವ ಮೂಲಕ ಸಂಚಾರಕ್ಕೆ ಮುಕ್ತಗೊಳಿಸಿದರು.

ಬಳಿಕ ಮಾತನಾಡಿದ ಅವರು ಗನ್ ಹೌಸ್ ವೃತ್ತದಿಂದ ರಿಂಗ್ ರಸ್ತೆವರೆಗಿನ 17.1  ಕೋಟಿ ರೂಪಾಯಿಯ ವೆಚ್ಚದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕಳೆದ ಒಂಭತ್ತು ತಿಂಗಳುಗಳಿಂದ ಪ್ರಗತಿಯಲ್ಲಿತ್ತು. ವಿಸ್ತಾರವಾದ ಈ ರಸ್ತೆಯಲ್ಲಿ ನಂಜನಗೂಡಿನ ಕಡೆ ಹೋಗುವುದು ಏಕಮುಖ ಸಂಚಾರವಾಗಿರುವುದರಿಂದ  ಅಪಘಾತಗಳ ನಿಯಂತ್ರಣವಾಗಲಿದೆ.

ಲೋಕೋಪಯೋಗಿ ಇಲಾಖೆ ಅಶೋಕ್ ಎಂಬ ಗುತ್ತಿಗೆದಾರನ ಮೂಲಕ ಕಾಮಗಾರಿ ನಡೆಸಿದ್ದು, ಬಹಳ ಯಶಸ್ವಿಯಾಗಿದೆ.  ಮೈಸೂರು ಒಂದು ಪ್ರವಾಸಿತಾಣವಾಗಿದ್ದು ನೆರೆ ರಾಜ್ಯವಾದ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆಯ ಅಭಿವೃದ್ಧಿ ಆಗಿರುವುದು ಒಂದು ಮೈಲಿಗಲ್ಲು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಾರ್ಡ್ ನಂ 1  ರ ನಗರಪಾಲಿಕೆ ಸದಸ್ಯರಾದ ಬಿ ವಿ ಮಂಜುನಾಥ್,  ಲೋಕೋಪಯೋಗಿ ಇಲಾಖೆಯ  ಅಧಿಕಾರಿಗಳು, ಗುತ್ತಿಗೆದಾರರಾದ ಅಶೋಕ್, ಪೊಲೀಸ್ ಅಧಿಕಾರಿಗಳು  ಮತ್ತು ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: