ದೇಶಪ್ರಮುಖ ಸುದ್ದಿ

ಪ್ರತಿ ಬಾರಿಯೂ ಭಾರತದಿಂದ ವಿದೇಶಕ್ಕೆ ಪ್ರಯಾಣ ಬೆಳೆಸಲು ನಟ ಸಲ್ಮಾನ್ ನ್ಯಾಯಾಲಯದ ಅನುಮತಿ ಪಡೆಯಬೇಕಂತೆ

ದೇಶ(ಮುಂಬೈ)ಜು.6:- ಕೃಷ್ಣ ಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೋಧ್​ಪುರ ನ್ಯಾಯಾಲಯದ ಆದೇಶದನ್ವಯ ಬಾಲಿವುಡ್​ ಸೂಪರ್​ ಸ್ಟಾರ್​ ಸಲ್ಮಾನ್​ ಖಾನ್​ ಪ್ರತಿ ಬಾರಿಯೂ ಭಾರತದಿಂದ ವಿದೇಶಕ್ಕೆ ಪ್ರಯಾಣ ಬೆಳೆಸಲು ಇನ್ನು ಮುಂದೆ ನ್ಯಾಯಾಲಯದಿಂದ ಅನುಮತಿ ಪಡೆಯಬೇಕಾಗುತ್ತದೆ ಎಂದು ನ್ಯಾಯಾಲಯ ಆದೇಶ ನೀಡಿದೆ.

ಈ ಮೂಲಕ ಸಲ್ಮಾನ್​ ಖಾನ್​ ಅವರ ಮುಂಬರುವ ಸಿನಿಮಾ ಶೂಟಿಂಗ್​ ಮೇಲೆ ಇದು ಪ್ರಭಾವ ಬೀರುವುದರಲ್ಲಿ ಅನುಮಾನವಿಲ್ಲ. ಸಲ್ಮಾನ್​ ಖಾನ್​ ಶೀಘ್ರದಲ್ಲೇ ಅಲೀ ಅಬ್ಬಾಸ್​ ಜಾಫರ್​ ನಿರ್ದೇಶನದ ಸಿನಿಮಾ ‘ಭಾರತ್’​ನಲ್ಲಿ ಕಾಣಿಸಿಕೊಳ್ಳಲಿದ್ದು, ನಿರ್ಮಾಣ ಕಾರ್ಯ ನಡೆಯುತ್ತಿದೆ. ಇದನ್ನು ಹೊರತುಪಡಿಸಿ ದಬಾಂಗ್​-3 ಹಾಗೂ ಕಿಕ್​-2 ಸಿನಿಮಾಗೆ ಸಂಬಂಧಿಸಿದಂತೆ ನಿರ್ಮಾಣದ ತಯಾರಿ ನಡೆಯುತ್ತಿದೆ. ಸಲ್ಮಾನ್​ ಖಾನ್​ರನ್ನು ಕೃಷ್ಣ ಮೃಗ ಬೇಟೆ ಪ್ರಕರಣದಲ್ಲಿ ದೋಷಿ ಎಂದು ಪರಿಗಣಿಸಲಾಗಿತ್ತು. 19 ವರ್ಷಗಳ ಹಿಂದಿನ ಈ ಪ್ರಕರಣದಲ್ಲಿ ಸಲ್ಲು ಜೈಲಿಗೆ ಹೋಗಿದ್ದರು. ಹೀಗಿದ್ದರೂ ಕೇವಲ ಎರಡು ದಿನಗಳಲ್ಲೇ ಅವರಿಗೆ ಜಾಮೀನು ಮಂಜೂರಾಗಿತ್ತು.

ಈ ಕುರಿತಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಸಲ್ಮಾನ್​ “ನಾನು ಶಾಶ್ವತವಾಗಿ ಜೈಲು ಸೇರುತ್ತೇನೆಂದು ನಿಮಗೆ ಅನಿಸಿತ್ತಾ?” ಎಂದು ಪ್ರಶ್ನಿಸಿದ್ದರು. ಸಲ್ಮಾನ್​ ಖಾನ್​ ಹೊರತುಪಡಿಸಿ ನಟ ಸೈಫ್​ ಅಲಿ ಖಾನ್​, ಟಬು, ಸೊನಾಲಿ ಬೇಂದ್ರೆ ಹಾಗೂ ನೀಲಂರವರನ್ನೂ ಈ ಪ್ರಕರಣದ ಆರೋಪಿಗಳೆಂದು ಪರಿಗಣಿಸಲಾಗಿತ್ತು. ಆದರೆ ಕೋರ್ಟ್​ ಇವರನ್ನು ದೋಷಮುಕ್ತಗೊಳಿಸಿತ್ತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: