ಸುದ್ದಿ ಸಂಕ್ಷಿಪ್ತ

ರಾಜ್ಯ ಮಟ್ಟದ ಗಾಯನ ಸ್ಪರ್ಧೆ

ಸಮರ್ಪಣಾ ರಾಧಮ್ಮ ಟ್ರಸ್ಟ್ ಸ್ಮಾರಕ ವತಿಯಿಂದ ಜನವರಿ 8 ರಂದು ಬೆಳಿಗ್ಗೆ 9ಗಂಟೆಗೆ ಲಕ್ಷ್ಮಿಪುರಂನಲ್ಲಿರುವ ಗೋಪಾಲಸ್ವಾಮಿ ಶಿಶುವಿಹಾರ ಶಿಕ್ಷಣ ಸಂಸ್ಥೆಯಲ್ಲಿ ಸಮರ್ಪಣಾ ಗಾಯನ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಕರ್ನಾಟಕ ಶಾಸ್ತ್ರೀಯ ಸಂಗೀತ, ದೇವರನಾಮ, ಭಾವಗೀತೆ, ಜನಪದಗೀತೆ, ದೇಶಭಕ್ತಿಗೀತೆಗಳಲ್ಲಿ ಸ್ಪರ್ಧೆ ನಡೆಯಲಿದೆ.

ಹೆಸರು ನೋಂದಾಯಿಸಲು ಜನವರಿ 3ಕೊನೆಯ ದಿನವಾಗಿದ್ದು, ಆಸಕ್ತರು ಮೊ.ಸಂ.9449038733ನ್ನು ಸಂಪರ್ಕಿಸಬಹುದು. 1-16ವರ್ಷದ ವಯೋಮಿತಿಯಲ್ಲಿರುವವರು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಸಮರ್ಪಣಾ ಗಾಯನ ಸ್ಪರ್ಧೆಯ ಅಂತಿಮ ಸುತ್ತಿಗೆ ಆಯ್ಕೆಯಾದ ಮಕ್ಕಳಿಂದ ಗೀತಗುಚ್ಛ ಗಾಯನ ಕಾರ್ಯಕ್ರಮ ನಡೆಯಲಿದೆ.

Leave a Reply

comments

Related Articles

error: