ಕರ್ನಾಟಕ

ಕೊಳಕೇರಿಯಲ್ಲಿ ಹುಬ್ಬುರ್ರಸೂಲ್ ಸಮಾವೇಶ

ರಾಜ್ಯ(ಮಡಿಕೇರಿ) ಆ.6 :- ಪ್ರವಾಸಿಗಳ ಸಂದೇಶ ಸಾರುವ ಹುಬ್ಬುರ್ರಸೂಲ್ ಸಮಾವೇಶ ಆ.8 ರಂದು ಕೊಳಕೇರಿಯಲ್ಲಿ ನಡೆಯಲಿದೆ ಎಂದು ಸಮಾವೇಶದ ಸ್ವಾಗತ ಸಮಿತಿ ಸದಸ್ಯ ಅಬ್ದುಲ್ ಹಮೀದ್ ಮುಸ್ಲಿಯಾರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಳಕೇರಿ ಶಾಖಾ ಎಸ್‍ವೈಎಸ್ ಮತ್ತು ಎಸ್‍ಎಸ್‍ಎಫ್ ಜಂಟಿ ಆಶ್ರಯದಲ್ಲಿ ಅಂದು ಸಂಜೆ 7 ಗಂಟೆಗೆ ನಡೆಯುವ ಸಮಾವೇಶದಲಿ ಖ್ಯಾತ ವಾಗ್ಮಿ ಡಾ. ಮೊಹಮ್ಮದ್ ಫಾರೂಕ್ ನಈಮ್ ಅಲ್ ಬುಖಾರಿ ಅವರು ಪ್ರವಾದಿಯವರ ಸಂದೇಶವನ್ನು ನೀಡಲಿದ್ದಾರೆ. ಅಂದು ಸಂಜೆ 5.30 ಗಂಟೆಗೆ ಜಿಲ್ಲಾ ನಾಯೀಬ್ ಖಾಝಿ ಮೆಹಮೂದ್ ಉಸ್ತಾದ್ ಅವರು ಮಖಾಂ ಜಿಯಾರತ್‍ಗೆ ನೇತೃತ್ವ ನೀಡಲಿದ್ದು, ಸ್ವಾಗತ ಸಮಿತಿ ಅಧ್ಯಕ್ಷ ಸಿ.ಎ. ಮೆಹಮೂದ್ ಹಾಜಿ ಧ್ವಜಾರೋಹಣ ಮಾಡಲಿದ್ದಾರೆ.  ಸಂಜೆ 7 ಗಂಟೆಗೆ ನಡೆಯುವ ಸಮಾವೇಶದ ಅಧ್ಯಕ್ಷತೆಯನ್ನು ಕೊಳಕೇರಿ ಸುನ್ನಿ ಮುಸ್ಲಿಂ ಜಮಾಯತ್ ಅಧ್ಯಕ್ಷ ಬಿ.ಎ. ನಾಸೀರ್ ವಹಿಸಲಿದ್ದು, ಸಮಾವೇಶವನ್ನು ಧರ್ಮಗುರು ಝೈನುದ್ದೀನ್ ಸಅದಿ ಉದ್ಘಾಟಿಸಲಿದ್ದಾರೆ, ಎಸ್‍ಎಸ್‍ಎಫ್ ರಾಜ್ಯಾಧ್ಯಕ್ಷ ಇಸ್ಮಾಯಿಲ್ ಸಖಾಫಿ ಸಂದೇಶ ಭಾಷಣ ಮಾಡಲಿದ್ದು, ಎಸ್‍ವೈಎಸ್ ಜಿಲ್ಲಾಧ್ಯಕ್ಷ ಹಫೀಳ್ ಸಅದಿ , ಎಸ್‍ಎಸ್‍ಎಫ್ ಜಿಲ್ಲಾಧ್ಯಕ್ಷ ಕರೀಂ ಫಾಝಿಲಿ, ಎಸ್‍ಜೆಎಂ ಜಿಲ್ಲಾಧ್ಯಕ್ಷ ಶಾದುಲಿ ಫೈಝಿ, ಜಿಲ್ಲಾ ಸುನ್ನಿ ಜಮಾಅತ್ ಕಾರ್ಯದರ್ಶಿ ಮೊಯ್ದೀನ್ ಕುಟ್ಟಿ ಹಾಜಿ, ನಾಪೋಕ್ಲು ಗ್ರಾಮ ಪಂಚಾಯ್ತಿ ಸದಸ್ಯರಾದ ಎ.ಕೆ. ಹಾರೀಸ್, ಟಿ.ಹೆಚ್. ಅಹಮ್ಮದ್ ಮೊದಲಾದವರು ಭಾಗವಹಿಸಲಿದ್ದಾರೆ.   (ಕೆಸಿಐ,ಎಸ್.ಎಚ್)

Leave a Reply

comments

Related Articles

error: