ಮೈಸೂರು

ಲಂಚಬಾಕ ಅಧಿಕಾರಿ ವಜಾಕ್ಕೆ ಅಂಗವಿಕಲರ ಸಂಘದ ಒತ್ತಾಯ

ಮೈಸೂರು,ಆ.7 : ಅಂಗವಿಕಲರಿಗೆಂದು ಸರ್ಕಾರ ನೀಡುತ್ತಿರುವ ಸವಲತ್ತುಗಳನ್ನು ಪಡೆಯಲು ಅಧಿಕಾರಿಗಳಿಗೆ ಲಂಚ ನೀಡಬೇಕಾದ ಅನಿವಾರ್ಯತೆ ಎದುರಾಗಿದ್ದು, ಆ ಅಧಿಕಾರಿಯನ್ನು ಕೂಡಲೇ ವಜಾಗೊಳಿಸಬೇಕೆಂದು ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರ ಅಂಗವಿಕಲರ ಸಂಘವು ಆಗ್ರಹಿಸಿತು.

ತಾಲ್ಲೂಕು ಪಂಚಾಯಿತಿ ಸಂಯೋಜಕಿ (ಎಂ.ಆರ್.ಡಬ್ಲ್ಯು) ಅಧಿಕಾರಿ ಲಕ್ಷ್ಮೀ ಅವರ ಲಂಚಬಾಕತನದಿಂದಾಗಿ ಅಂಗವಿಕಲರಿಗೆ ಅನ್ಯಾಯವಾಗಿದೆ, ಗುರುತಿನ ಚೀಟಿ ಸೇರಿದಂತೆ ಯಾವುದೇ ಸವಲತ್ತು ಪಡೆಯಬೇಕಾದರೂ ಇಂತಿಷ್ಟು ಲಂಚ ನೀಡಲೇಬೇಕೆಂಬ ಮೌಖಿಕ ಆದೇಶವಿದ್ದು, ದುಡಿಯಲು ಸಾಧ್ಯವಿಲ್ಲದ ತಾವುಗಳು ಆ ಹಣ ಒದಗಿಸಲು ಸಾಧ್ಯವಾಗದ ಹಿನ್ನಲೆಯಲ್ಲಿ ಯಾವ ಸವಲತ್ತುಗಳುಲಭಿಸದೇ ತೀವ್ರ ಸಂಕಷ್ಟ ಏದುರಿಸುವಂತಾಗಿದೆ ಎಂದು ಸಂಘದ ಸಣ್ಣ ಸ್ವಾಮಿ ಅಲವತ್ತುಕೊಂಡರು.

ಸಂಘದ ಮತ್ತೊಬ್ಬ ಸದಸ್ಯ ಸಣ್ಣ ತಮ್ಮೇಗೌಡ ಮಾತನಾಡಿ, ಚಿಕಿತ್ಸಾ ವೆಚ್ಚ ಭರಿಸಲು  ಮನೆ, ಆಸ್ತಿ ಮಾರಿಕೊಳ್ಳುವಂತಹ ದುಸ್ಥಿತಿ ಅಂಗವಿಕಲರಿಗೆ ಎದುರಾಗಿದೆ, ಹೀಗಿದ್ದರೂ ಲಂಚ ಕೇಳುತ್ತಿರುವ ಅಧಿಕಾರಿ ಲಕ್ಷ್ಮೀಯನ್ನು ತಕ್ಷಣವೇ ವಜಾಗೊಳಿಸಬೇಕು, ಈ ಬಗ್ಗೆ ಸಂಬಂಧಿಸಿದ ಸಚಿವ, ಸಂಸದರಿಗೆ ಪತ್ರ ಬರೆದಿದ್ದು ಕ್ರಮ ಕೈಗೊಳ್ಳದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಕೃಷ್ಣ, ಶಾಂತ, ಸತೀಶ್, ರಾಘವೇಂದ್ರ, ಸ್ವಾಮಿಗೌಡ, ಕೃಷ್ಣೇಗೌಡ, ಮಹೇಶ್ ಗೋಷ್ಠಿಯಲ್ಲಿ ತಮ್ಮ ಅಳಲನ್ನು ತೋಡಿಕೊಂಡರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: