
ಪ್ರಮುಖ ಸುದ್ದಿಮನರಂಜನೆ
ಪವರ್ ಸ್ಟಾರ್ ಕೊಟ್ರು ನೋಡಿ ಹೊಸ ಚಾಲೆಂಜ್!
ರಾಜ್ಯ(ಕರ್ನಾಟಕ)ಆ.7:- ಇದೀಗ ಒಂದಿಲ್ಲೊಂದು ಚಾಲೆಂಜ್ ನೀಡೋದು, ಅದನ್ನು ಸ್ವೀಕರಿಸೋದು ಸಾಮಾನ್ಯವಾಗಿ ಬಿಟ್ಟಿದೆ. ಚಂದನವನದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ, ಹ್ಯಾಂಡ್ ಶೇಕ್ ಚಾಲೆಂಜ್ ಆರಂಭಿಸಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ತಮ್ಮ ಫೇಸ್ ಬುಕ್ ಪುಟದಲ್ಲಿ ಹ್ಯಾಂಡ್ ಶೇಕ್ ಚಾಲೆಂಜ್ ಗೆ ಕಿಕ್ ಸ್ಟಾರ್ಟ್ ಕೊಟ್ಟಿದ್ದು, ಗಟ್ಟಿಯಾಗಿ ಕೈಕುಲುಕುವುದರಿಂದ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ ಎಂದು ಬರೆದುಕೊಂಡಿದ್ದು, ಕೈಕುಲುಕುತ್ತಿರುವ ಚಿತ್ರವನ್ನು ಪ್ರಕಟಿಸುವುದರೊಂದಿಗೆ ನಟ ರಕ್ಷಿತ್ ಶೆಟ್ಟಿ, ಸಂತೋಷ್ ಆನಂದ್ ರಾಮ್, ಡ್ಯಾನಿಶ್ ಸೇಠ್ ಅವರಿಗೆ ಈ ಸವಾಲನ್ನು ನೀಡಿದ್ದಾರೆ. ಪವರ್ ಸ್ಟಾರ್ ಆರಂಭಿಸಿರುವ ಈ ಅಭಿಯಾನಕ್ಕೆ ಚಿತ್ರರಂಗ, ಹಾಗೂ ಅಭಿಮಾನಿಗಳ ಪ್ರತಿಕ್ರಿಯೆ ಹೇಗಿರಲಿದೆ ಎಂಬುದನ್ನು ಕಾದುನೋಡಬೇಕಿದೆ. (ಎಸ್.ಎಚ್)