ಕರ್ನಾಟಕ

ವೃದ್ಧೆ ಆಸ್ಪತ್ರೆಗೆ ದಾಖಲು : ವಾರಸುದಾರರ ಸಂಪರ್ಕಕ್ಕೆ ಮನವಿ

ರಾಜ್ಯ(ಉಡುಪಿ),ಆ.8:- ನಗರದ ಹೊರ ವಲಯದ ಗುಜ್ಜರಬೆಟ್ಟು ಪ್ರದೇಶದಲ್ಲಿ ಮಂಗಳವಾರ ರಾತ್ರೆ 10 ಗಂಟೆ ಸುಮಾರಿಗೆ 80 ವರ್ಷದ ವೃದ್ಧೆಯೊರ್ವರು ಅಸ್ವಸ್ಥಗೊಂಡು ಅಸಹಾಯಕ ಪರಿಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ವಿಷಯ ತಿಳಿದ ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ಸ್ಥಳಿಯರ ನೆರವು ಪಡೆದು, 108 ಆ್ಯಂಬುಲೆನ್ಸ್ ಸಹಾಯದೊಂದಿಗೆ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

ವೃದ್ಧೆ ತನ್ನ ಹೆಸರು ಪುಟ್ಟ ಮಾದಮ್ಮ(80) ಗಂಡ ಮರಿ ವೀರಪ್ಪ, ಹೊನ್ನಲಗೆರೆ, ಮದ್ದೂರು ಮಂಡ್ಯ ಜಿಲ್ಲೆ ಎಂದು ವಿಳಾಸ ನೀಡಿದ್ದಾರೆ. ಅವರು ಮನನೊಂದವರಂತೆ ಮೇಲ್ನೋಟಕ್ಕೆ ಕಂಡು ಬಂದಿದ್ದು,ವಾರಸುದಾರರು ಉಡುಪಿ ಜಿಲ್ಲಾಸ್ಪತ್ರೆಯ ನಾಗರಿಕ ಸಹಾಯ ಕೇಂದ್ರವನ್ನು ಸಂಪರ್ಕಿಸುವಂತೆ ವಿಶು ಶೆಟ್ಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: